ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘ ಅಧ್ಯಕ್ಷರಾಗಿ ಡಾ| ನಿತಿನ್ ಪ್ರಭು ಆಯ್ಕೆ

0

 

p>

ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘದ ಅಧ್ಯಕ್ಷರಾಗಿ ಸುಳ್ಯ ಪಶು ಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ನಿತಿನ್ ಪ್ರಭು ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ| ರಂಗಯ್ಯ ಎಸ್., ಕಾರ್ಯದರ್ಶಿಯಾಗಿ ಸುಳ್ಯ ಸ.ಪ. ಪೂ. ಕಾಲೇಜು ಉಪ ಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಕೋಶಾಧಿಕಾರಿಯಾಗಿ ಸಿಡಿಪಿಒ ಶ್ರೀಮತಿ ರಶ್ಮಿ ಕೆ.ಎಂ., ಗೌರವಾಧ್ಯಕ್ಷರುಗಳಾಗಿ ತಹಶೀಲ್ದಾರ್ ಅನಿತಾಲಕ್ಷ್ಮೀ, ಇ.ಒ. ಭವಾನಿಶಂಕರ ಎನ್., ಬಿ.ಇ.ಒ. ಎಸ್.ಪಿ. ಮಹಾದೇವ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ| ನಂದಕುಮಾರ್ ಬಿ, ಪತ್ರಾಂಕಿತ ಉಪ ಖಜಾನಾಧಿಕಾರಿ ಬಾಲಕೃಷ್ಣ ಎಂ., ತೋಟಗಾರಿಕಾಧಿಕಾರಿ ಶ್ರೀಮತಿ ಸುಹಾನ ಎ.ಕೆ., ಎ.ಸಿ.ಎಫ್. ಪ್ರವೀಣ್ ಕುಮಾರ್ ಶೆಟ್ಟಿ, ಆರ್.ಎಫ್.ಒ. ಮಂಜುನಾಥ್ ಎನ್., ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಸಮಾಜಕಲ್ಯಾಣಾಧಿಕಾರಿ ರವಿಕುಮಾರ್ ಸಿ.ಆರ್., ಸುಳ್ಯ ಡಿಗ್ರಿ ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್., ನಿವೃತ್ತ ಶಿಕ್ಷಣಾಧಿಕಾರಿ ಎಸ್.ಶಂಕರ ಪಾಟಾಳಿ, ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಕರುಣಾಕರ ಕೆ.ವಿ. ಆಯ್ಕೆಯಾದರು.
ಆ.15ರಂದು ಸಂವಾದ ಕಾರ್ಯಕ್ರಮ : ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಆ.೧೫ರಂದು ಅಧಿಕಾರಿಗಳ ಮನೋರಂಜನಾ ಸಂಘದ ವತಿಯಿಂದ `ನಾವು ನಿಜವಾಗಿಯೂ ಸ್ವತಂತ್ರರೇ ಎಂಬ ವಿಷಯದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಪರಾಹ್ನ 2 ರಿಂದ 4 ಗಂಟೆವರೆಗೆ ಸುಳ್ಯದ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ನಡೆಯುವುದು.

LEAVE A REPLY

Please enter your comment!
Please enter your name here