ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲ ನಿವೃತ್ತಿ – ಸತ್ಕಾರ ಕೂಟ

0

ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲರವರು ಸೇವಾ ನಿವೃತ್ತಿ ಹೊಂದಿದ್ದು ಅಭಿನಂದನೆ ಮತ್ತು ಸತ್ಕಾರ ಕೂಟವು ಆ.14 ರಂದು ಐವರ್ನಾಡಿನ ಪಲ್ಲತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಕರುಣಾಕರ ಮಡ್ತಿಲ ಮತ್ತು ಶ್ರೀಮತಿ ಸವಿತಾ ದಂಪತಿಗಳನ್ನು ಶಾಲು ಹೊದಿಸಿ, ಫಲ, ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮಡ್ತಿಲ ಕುಟುಂಬದ ದಿನೇಶ ಮಡ್ತಿಲ ಹಾಗೂ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡರು ಮಾತನಾಡಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಹಾಗೂ ಆಗಮಿಸಿದ ಹಲವು ಜನ ಗಣ್ಯರು ಶುಭಹಾರೈಸಿದರು.