ಪೈಲಾರು ಅಮರ ಸಂಘಟನಾ ವತಿಯಿಂದ ಅಮರ ಮ್ಯಾರಥಾನ್

0

ಸಾಧಕರಿಗೆ ಅಮರ ರತ್ನ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ

p>

ಅಮರಮುಡ್ನೂರು ಗ್ರಾಮದ ಪೈಲಾರಿನ ಅಮರ ಸಂಘಟನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ 5 ನೇ ವರ್ಷದ ಅಮರ ಮ್ಯಾರಥಾನ್ ಹಾಗೂ ಅಮರ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆ. 14ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಡಾ| ಸನತ್ ಕುಮಾರ್ ಡಿ.ಜಿ ಮ್ಯಾರಥಾನ್ ಗೆ ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಿಕ್ಷಕಿ ಶ್ರೀಮತಿ ಕೃತಿಕಾ ಕನಕಮಜಲು ಇವರಿಗೆ ಅಮರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟದ ಸಾಧನೆಗಾಗಿ ಸಂಘಟನೆಯ ನಿರ್ದೇಶಕಿ ಶ್ರೀಮತಿ ರಾಜೀವಿ ಗೋಳ್ಯಾಡಿ ಯವರನ್ನು ಸನ್ಮಾನಿಸಲಾಯಿತು.ಸಂಘಟನೆಯ ಅಧ್ಯಕ್ಷ ರಜನಿಕಾಂತ್ ಉಮ್ಮಡ್ಕ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಮೇಲ್ತೋಟ, ಅಕ್ಷಯ್ ಇಂಡಸ್ಟ್ರೀಸ್ ನ ಹೇಮನಾಥ್ ಕೋಡ್ತುಗುಳಿ, ಚೊಕ್ಕಾಡಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ,ಪಂಚಾಯತ್ ಸದಸ್ಯ ಜಯಪ್ರಕಾಶ್ ದೊಡ್ಡಿಹಿತ್ಲು ಉಪಸ್ಥಿತರಿದ್ದರು. ಪ್ರಸನ್ನಕುಮಾರಿ ಸ್ವಾಗತಿಸಿ, ಮಿಥುನ್ ಕೆರೆಗದ್ದೆ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಮ್ಯಾರಥಾನ್ ನಲ್ಲಿ ವಿಜಯಿಯಾದ ಕ್ರೀಡಾಪಟುಗಳಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here