ಐನೆಕಿದು: ನೂತನವಾಗಿ ನಿರ್ಮಿತವಾದ ಅಮೃತ ಸಮುದಾಯ ಭವನ ಲೋಕಾರ್ಪಣೆ

0

ಗ್ರಾಮೀಣ ಭಾಗದಲ್ಲಿ ಸಮುದಾಯ ಭವನಗಳು ಅತ್ಯಗತ್ಯ.ಇವುಗಳು ಅ ಪ್ರದೇಶದ ಪ್ರಗತಿಗೆ ಮೂಲವಾಗಬೇಕು. ಉತ್ತಮ ಗುಣ ಮಟ್ಟದ ಚರ್ಚೆಗಳು ಮತ್ತು ಕಾರ್ಯಕ್ರಮಗಳು ಈ ಭವನದಲ್ಲಿ ನಡೆಯುವ ಮೂಲಕ ಊರಿನ ಅಭಿವೃದ್ಧಿಯಾಗಲಿ. ಸುವಿಚಾರದ ಬಗ್ಗೆ ಚಿಂತನೆಗಳು ಭವನದಲ್ಲಿ ನೆರವೇರಲಿ. ಗ್ರಾಮೀಣ ಭಾಗದ ವಿಕಾಸಕ್ಕೆ ಸಮುದಾಯ ಭವನ ಸ್ಪೂರ್ತಿಯಾಗಲಿ
ಎಂದು ಪಿಡಿಒ ಯು.ಡಿ.ಶೇಖರ್ ಹೇಳಿದರು. ಅವರು ಗ್ರಾ.ಪಂ ಸುಬ್ರಹ್ಮಣ್ಯ ಇದರ ವತಿಯಿಂದ ಅಜಾದಿ ಕಾ ಅಮೃತ ಮಹೋತ್ಸವ ದ ಅಂಗವಾಗಿ
ಸುಬ್ರಹ್ಮಣ್ಯ ಪಂಚಾಯತ್ ವ್ಯಾಪ್ತಿಯ ಐನೆಕಿದುನಲ್ಲಿ ನೂತನವಾಗಿ ನಿರ್ಮಿತವಾದ ಅಮೃತ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಪ್ರಗತಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ಯುವಕರು ಗ್ರಾಮೀಣ ಭಾಗದ ಅಭಿವೃದ್ಧಿ ಗೆ ಕರ ಜೋಡಿಸಬೇಕು. ಯುವಕರ ಅಭಿವೃದ್ಧಿಗಾಗಿ ಇದೀಗ ಕೇಂದ್ರ ಸರಕಾರದಿಂದ ವಿವೇಕಾನಂದ ಸ್ವಸಹಾಯ ಸಂಘ ಎಂಬ ಹೊಸ ಪರಿಕಲ್ಪನೆ ಆರಂಭಗೊಳ್ಳಲಿದೆ. ಇದು ಯುವಕರ ಪ್ರಗತಿಗೆ ಪೂರಕವಾಗಿದೆ. ಆದುದರಿಂದ ಯುವಕರು ಸಂಘ ಸದಸ್ಯರಾಗಬೇಕು ಎಂದರು. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ ಸಮುದಾಯ ಭವನ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮ ವನ್ನು ಮಾಜಿ ತಾ.ಪಂ.ಸದಸ್ಯೆ ತಾರಾ ಮಲ್ಲಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು 7 ವರ್ಷದ ಕನಸು ಇದೀಗ ನೆನಸಾಗಿರುವುದು ಸಂತಸ ತಂದಿದೆ.ಗ್ರಾಮೀಣ ಭಾಗದಲ್ಲಿ ಅತ್ಯವಶ್ಯಕವಾದ ಸಮುದಾಯ ಭವನವು ಜನತೆಗೆ ದೊರಕಿದೆ.ಈ ಸಮುದಾಯ ಭವನಕ್ಕೆ ಬೇಕಾದ ಇತರ ಪರಿಕರಗಳನ್ನು ದಾನಿಗಳಿಂದ ಭರಿಸಿಕೊಂಡು ಜನತೆಯ ಹೆಚ್ಚಿನ ಉಪಯೋಗವಾಗುವಂತೆ ಮಾಡಬೇಕು ಎಂದರು.

ಗೌರವಾರ್ಪಣೆ: ಈ ಹಿಂದೆ ಹರಿಹರ ಹೊಳೆಯಲ್ಲಿ ಪ್ರವಾಹ ಬಂದ ಸಂದರ್ಭ ನೆರೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಸೋಮಶೇಖರ್ ಕಟ್ಟೆಮನೆ ಅವರನ್ನು ಪಿಡಿಒ ಯು.ಡಿ.ಶೇಖರ್ ಸನ್ಮಾನಿಸಿದರು.
ಸಮಾರಂಭದ ಗ್ರಾ.ಪಂ.ಅಧ್ಯಕ್ಷೆ ಲಲಿತಾ.ಜಿ.ಗುಂಡಡ್ಕ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷೆ ಸವಿತಾ ಭಟ್, ಪಿಡಿಒ ಯು.ಡಿ.ಶೇಖರ್, ಕಾರ್ಯದರ್ಶಿ ಮೋನಪ್ಪ.ಡಿ, ಹರಿಹರೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕೂಜುಗೋಡು, ಐನೆಕಿದು-ಸುಬ್ರಹ್ಮಣ್ಯ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ನಿಸರ್ಗ ಯುವಕ ಮಂಡಲದ ಅದ್ಯಕ್ಷ ಅಜಿತ್ ಕಲ್ಲೇರಿ, ಗ್ರಾ.ಪಂ ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ, ಭಾರತಿ ಮೂಕಮಲೆ, ಶಿವರಾಮ ನೆಕ್ರಾಜೆ, ಭಾರತಿ ದಿನೇಶ್, ಪ್ರಮುಖರಾದ ಸತೀಶ್ ಕೂಜುಗೋಡು, ಗುಣವರ್ಧನ ಕೆದಿಲ ಮುಖ್ಯ ಅತಿಥಿಗಳಾಗಿದ್ದರು.
ಗ್ರಾ.ಪಂ ಸದಸ್ಯರಾದ ವೆಂಕಟೇಶ್ ಎಚ್.ಎಲ್, ನಾರಾಯಣ ಅಗ್ರಹಾರ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಅಜಾದಿ ಕ ಅಮೃತ ಮಹೋತ್ಸವ ಸಮಿತಿ ಸಂಚಾಲಕರಾದ ವಿಶ್ವನಾಥ ನಡುತೋಟ, ರತ್ನಾಕರ.ಎಸ್ ಉಪಸ್ಥಿತರಿದ್ದರು. ಭುಕ್ಷಿತ್ ವಂದಿಸಿದರು. ನವೀನ್ ಕಟ್ರಮನೆ ಕಾರ್ಯಕ್ರಮ ನಿರೂಪಿಸಿದರು.