ಕಲ್ಮಕಾರು, ಕೊಯನಾಡು,ಕೊಲ್ಲಮೊಗ್ರ ಸಹಿತ ಗಡಿ ಪ್ರದೇಶಗಳಲ್ಲಿ ದೊಡ್ಡ ಸದ್ದಿನೊಂದಿಗೆ ಸಣ್ಣ ಕಂಪನ

0

 

ಕಲ್ಮಕಾರು ಪರಿಸರದಲ್ಲಿ ಇಂದು 6.15 ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ.

ಈ ಅನುಭವವನ್ನು ಹಲವರು ಸುದ್ದಿಯ ಗಮನಕ್ಕೆ ತಂದಿದ್ದಾರೆ. ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದ್ದು ಕೊಲ್ಲಮೊಗ್ರದವರೆಗೂ ಶಬ್ದ ಕೇಳಿರುವುದಾಗಿ ತಿಳಿದು ಬಂದಿದೆ.

ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.

ಕಳೆದ ಒಂದೂವರೆ ತಿಂಗಳ ಹಿಂದೆ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಏಳೆಂಟು ಬಾರಿ ಕಂಪಿಸಿತ್ತು.ಚೆಂಬು ,ಅರಂತೋಡು ಕಂಪನದ ಕೇಂದ್ರ ಬಿಂದುವಾಗಿತ್ತು.ಇದೀಗ ಮತ್ತೆ ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭೂಮಿ ಕಂಪಿಸಿದ್ದು ಜನರು ಆತಂಕ ವ್ಯಕ್ತ ಪಡಿಸಿದ್ದಾರೆ.