ಮೊಗರ್ಪಣೆ ಇದಾಯತುಲ್ ಇಸ್ಲಾಂ ಜಮಾತ್ ಕಮಿಟಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಸುಳ್ಯ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾತ್ ಕಮಿಟಿ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಜಮಾತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸಿ ಫುಡ್ ಧ್ವಜಾರೋಹಣ ನೆರವೇರಿಸಿದರು. ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಥಳೀಯ ಮಸ್ಜಿದ್ ಮುದರಿಸ್ ಆಫಿಲ್ ಸೌಕತ್ ಅಲಿ ಸಕಾಫಿ, ಮದರಸ ಸದರ ಮುಅಲ್ಲಿಮ್ ಮಹಮ್ಮದ್ ಸಕಾಫಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು.
ಜೈನುಲ್ ಆಬಿದೀನ್ ತಂಗಳ್ ಜಯನಗರ, ಸ್ಥಳೀಯ ಕಮಿಟಿ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷರುಗಳಾದ ಸಿ ಎಂ ಉಸ್ಮಾನ್, ಜಮಾತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂರುಲ್ ಇಸ್ಲಾಂ ಮದರಸ ಅಧ್ಯಾಪಕವಂದದವರು, ಪೋಷಕರು ಭಾಗವಹಿಸಿದ್ದರು.
ಸಮಿತಿ ಪದಾಧಿಕಾರಿ ಎಸ್ ಸಂಸುದ್ದೀನ್ ಅಂಬೂರು ಅಭಿನಂದನ ಭಾಷಣ ಮಾಡಿದರು.
ಜಮಾತಿನ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here