ಕೊಯ್ನಾಡು ಎಸ್.ಎಸ್. ಮದರಸದಲ್ಲಿ ಸ್ವಾತಂತ್ರ ದಿನಾಚರಣೆ

0

 

ಕೊಯ್ನಾಡು ಎಸ್.ಎಸ್. ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್. ಎ ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ಹಂಸ ಸಅದಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸ್ಥಳೀಯ ಖತೀಬರಾದ ಅಬ್ದುಲ್ ಹಮೀದ್ ಅಮ್ಜಧಿ ಸಂದೇಶ ಭಾಷಣ ನಡೆಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಭಿಕರೆಲ್ಲರಿಗೂ ಎಸ್.ಬಿ.ಎಸ್ ಕಾರ್ಯದರ್ಶಿ ಜಾಬಿರ್ ಅಹಮದ್ ಪ್ರತಿಜ್ಞಾ ವಚನ ಬೋಧಿಸಿದರು . ಆರಂಭದಲ್ಲಿ ಎಸ್. ಬಿ.
ಎಸ್ .ಅಧ್ಯಕ್ಷರಾದ ಅಬ್ದುಲ್ ಮನಾಫ್ ಸ್ವಾಗತಿಸಿ, ಕೊನೆಯಲ್ಲಿ ಜಮಾಅತ್ ಕಾರ್ಯದರ್ಶಿ ರಫೀಕ್ ವಂದಿಸಿದರು.

 


ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ ಬಹುಮಾನ ವಿತರಣೆ ಹಾಗೂ ಸಿಹಿಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here