ಜಯನಗರ ಮದರಸ ಅಧ್ಯಾಪಕ ಅಬ್ದುಲ್ ಕರೀಂ ಸಕಾಫಿಯವರ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಸಮಾರಂಭ

0

 

ಮೊಗರ್ಪಣೆ ಕೇಂದ್ರ ಜಮಾತ್ ಇದರ ಅದೀನದಲ್ಲಿರುವ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದರಸದ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ ರವರ ಪವಿತ್ರ ಉಮ್ರಾ ಯಾತ್ರೆಗೆ ಬೀಳ್ಕೊಡುಗೆ ಸಮಾರಂಭ ಇಂದು ಜಯನಗರ ಮದರಸ ವಠಾರದಲ್ಲಿ ನಡೆಯಿತು.

ಈ ಬೀಳ್ಕೊಡುಗೆ ಸಮಾರಂಭವನ್ನು ಜಯನಗರ ಮದರಸಾ ಕಮಿಟಿಯ ವತಿಯಿಂದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮದರಸ ಕಮಿಟಿ ಅಧ್ಯಕ್ಷ ಜಾಹಿರ್ ಜಯನಗರ ವಹಿಸಿದ್ದರು.
ಸಯ್ಯದ್ ಜೈನುಲ್ ಆಬಿದೀನ್‌ ತಂಗಳ್ ರವರು ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊಗರ್ಪಣೆ ಜುಮಾ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಬೀಳ್ಕೊಡುಗೆ ಸಮಾರಂಭದ ಶುಭ ಹಾರೈಕೆ ಮಾತನಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ, ಎಚ್ ಐ ಜೆ ಕಮಿಟಿ ಮೊಗರ್ಪಣೆ ಇದರ ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಸ್ಥಳೀಯರಾದ ಅಶ್ರಫ್ ಅಂಜುಮಿ ಉಸ್ತಾದ್, ಸಮಿತಿ ಅಧ್ಯಕ್ಷ ಜಾಹೀರ್ ಜಯನಗರ ಮಾತನಾಡಿ ಯಾತ್ರೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಮಿಟಿ ವತಿಯಿಂದ ಉಮ್ರಾ ಯಾತ್ರೆ ಕೈಗೊಂಡಿರುವ ಅಬ್ದುಲ್ ಕರೀಂ ಸಕಾಫಿರವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿ ಯಾತ್ರೆಗೆ ಬೀಳ್ಕೊಡಲಾಯಿತು.

ವೇದಿಕೆಯಲ್ಲಿ ಹಿರಿಯರಾದ ಡಿ ಇಬ್ರಾಹಿಂ, ಅಬ್ದುಲ್ಲಾ ಹಾಜಿ ಜಯನಗರ, ಅನೀಫ್ ಪೋಸೋಟ್, ಸಮಿತಿ ಉಪಾಧ್ಯಕ್ಷ ಮಹಮ್ಮದ್ ಮುಟ್ಟತೋಡಿ ಉಪಸ್ಥಿತರಿದ್ದರು.
ಸಮಿತಿಯ ಎಲ್ಲಾ ಸದಸ್ಯರು, ವಿದ್ಯಾರ್ಥಿಗಳ ಪೋಷಕರು, ಸ್ಥಳೀಯ ಯುವಕರು, ಮದರಸಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯದರ್ಶಿ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಜಯನಗರ ವಂದಿಸಿದರು. ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.