ಮುಕ್ಕೂರು ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

 

ಮುಕ್ಕೂರು ಅಂಗನವಾಡಿಯಲ್ಲಿ ಹರ್ ಘರ್ ತಿರಂಗಾ ಪ್ರಯುಕ್ತ ಧ್ವಜಾರೋಹಣ ನಡೆಯಿತು.

ನೂತನ (ತಾತ್ಕಾಲಿಕ) ಧ್ವಜಸ್ತಂಭವನ್ನು ಪೆರುವಾಜೆ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿಯವರ ಕೋರಿಕೆಯ ಮೇರೆಗೆ ಸುನೀತ ಅಡ್ಯತಕಂಡ ಇವರು ಕೊಡುಗೆಯಾಗಿ ನೀಡಿದರು. ಅದರ ಕೆಲಸ ಕಾರ್ಯವನ್ನು ಹೊನ್ನಪ್ಪ ಗೌಡ ಚಾಮುಂಡಿಮೂಲೆ ನೆರವೇರಿಸಿದರು. ಧ್ವಜಾರೋಹಣವನ್ನು ಪಂಚಾಯತ್ ಸದಸ್ಯರಾದ ಗುಲಾಬಿ ಬೊಮ್ಮೆಮ್ಮಾರ್ ನೆರವೇರಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ವಸಂತಿ ಸಹಕರಿಸಿದರು.
ಅಂಗನವಾಡಿ ಸಮಿತಿಯ ಅಧ್ಯಕ್ಷರಾದ ಸೌಮ್ಯ ಬರೆಮೇಲು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಜಯಂತ ಕುಂಡಡ್ಕ ಸಹಕರಿಸಿದರು.ಸಮಿತಿ ಸದಸ್ಯರಾದ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಸೋಮನಾಥ ಕಂಡಿಪ್ಪಾಡಿ, ವಿಶಾಲಾಕ್ಷಿ ಬೊಮ್ಮಂತಗುಂಡಿ, ವನಿತಾ ಅಡ್ಯತಕಂಡ, ಚಿತ್ರಕಲಾ ಮುಕ್ಕುರು, ಖತಿಜಮ್ಮ ಮೂಕ್ಕುರು, ಪ್ರೇಮ ಕರಂಬುತ್ತೋಡಿ, ಭವ್ಯ ಕರ್ಪುತ್ತಾರು, ಉಮ್ಮರ್ ಕುಂಡಡ್ಕ ಉಪಸ್ಥಿತರಿದ್ದರು. ಕಾರ್ಯಕರ್ತೆ ರೂಪ ಸ್ವಾಗತಿಸಿ, ವಂದಿಸಿದರು. ಸೋಮನಾಥ ಕಂಡಿಪ್ಪಾಡಿಯವರು ಜನುಮದಿನದ ಸಿಹಿ ಹಂಚಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಪರವಾಗಿ ಸಿಹಿ ನೀಡಲಾಯಿತು. ಶಾಲಾ ಪರವಾಗಿಯೂ ಪಾನೀಯ & ಸಿಹಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here