ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆ

0


ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು.ದ್ವಜಾರೋಹಣವನ್ನು ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ನೆರವೇರಿಸಿದರು .ಈ ಸಂದರ್ಭದಲ್ಲಿ ಎಸ್. ಡಿ.ಎಂ.ಸಿ ಸದಸ್ಯರು , ಶಿಕ್ಷಕಕರು, ಪೋಷಕರು ಉಪಸ್ಥಿತರಿದ್ದರು. ಧ್ವಜಾರೋಹಣ ನಡೆದು ಬೃಹತ್ ಐಕ್ಯತೆಯ ನಡಿಗೆ ಗುತ್ತಿಗಾರು ಪೇಟೆಯ ಮೂಲಕ ಸಾಗಿಬಂದು ಶಾಲೆಯಲ್ಲಿ ಸಮಾಪನ ಗೊಂಡಿತು. ನಡಿಗೆಯಲ್ಲಿ ಚೆಂಡೆ ,ಬ್ಯಾಂಡ್ ,ರಾಷ್ಟ್ರ ಧ್ವಜದೊಂದಿಗೆ ಮಕ್ಕಳು ಹೆಜ್ಜೆಹಾಕಿದರು.