ಅರಂತೋಡು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಯ ಅಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ

0

ಸ್ವಾತಂತ್ರ್ಯ ಭಾರತದ 75 ನೇ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ‘ಹರ್ ಘರ್ ತಿರಂಗಾ’ಎಂಬ ಘೋಷ ವಾಕ್ಯದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯು ವೈಭವದ ಸಂಭ್ರಮವನ್ನು ಅರಂತೋಡು ಗ್ರಾಮ ಪಂಚಾಯತ್ ,ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಸುದ್ದಿ ಸಮೂಹ ಸಂಸ್ಥೆ ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು,ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ದುರ್ಗಾ ಮಾತಾ ಸಂಜಿವಿನಿ ಒಕ್ಕೂಟ,ಅರಂತೋಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವುಗಳ ಸಹಯೋಗದೊಂದಿಗೆ 75 ನೇ ಅಮೃತ ಮಹೋತ್ಸವ ವು ಅರಂತೋಡು ಸಿರಿ ಸೌಧ ದಲ್ಲಿ ನಾಳೆ ಆ 15 ರಂದು ನಡೆಯಿತು.ಬೆಳಿಗ್ಗೆ ಅರಂತೋಡು ಪಂಚಾಯತ್ ವಠಾರದಿಂದ ಹೊರಟಾ ವಾಹನ ಜಾಥ ಬಿಳಿಯಾರು ಪೆಟ್ರೋಲ್ ಬಂಕ್ ತನಕ ದವರೆಗೆ ಹೋಗಿ ಅರಂತೋಡು ನೆಹರು ಸ್ಮಾರಕ ಕಾಲೇಜು ತನಕ ಬಂದು ಅಲ್ಲಿಂದ ಶಾಲಾ ಮಕ್ಕಳ ಮೆರವಣಿಗೆಯಲ್ಲಿ ಸೇರಿಕೊಂಡು ಪಂಚಾಯತ್ ವಠಾರದಲ್ಲಿ ಸಮಾಪ್ತಿಗೊಂಡಿತು.ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆಯವರು ಧ್ವಜಾರೋಹಣ ನೇರವೇರಿಸಿದರು. ಕಾರ್ಯಕ್ರಮದಲ್ಲಿ ,ಸ್ವಾತಂತ್ರ್ಯ ದ ಬಗ್ಗೆ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ ಪ್ರಸ್ತಾವಿಕ ಭಾಷಣ ಮಾಡಿದರು. ಸಾಮಾಜಿಕ ಕಾರ್ಯಕರ್ತ ಎಂ.ಬಿ.ಸದಾಶಿವ ,ಸಂತೋಷ್ ಕುತ್ತಮೊಟ್ಟೆ,ಮಹೇಶ್ ,ಸುಧೀರ್ ನೆಕ್ರಾಜೆ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕು.ಶ್ವೇತಾ, ಶಿವಾನಂದ ಕುಕ್ಕುಂಬಳ,ಅಶ್ರಫ್ ಗುಂಡಿ ಸೇರಿದಂತೆ ಮುಂತಾದವರು ಭಾಗವಹಿಸಿದರು.ಬಿಳಿಯಾರು ಪೆಟ್ರೋಲ್ ಬಂಕ್ ಬಳಿಯಿಂದ ಹೊರಟ ವಾಹನ ಜಾಥಾ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳೊಂದಿಗೆ ಸೇರಿಕೊಂಡು ಪಂಚಾಯತ್ ವಠಾರದಲ್ಲಿ ಸಮಾಪ್ತಿಗೊಂಡಿತು.ಇನ್ನೊಂದು ಜಾಥಾವು ಅರಂತೋಡು ಸರಕಾರಿ ವಿಧ್ಯಾರ್ಥಿಗಳ ಮೆರವಣಿಗೆ ಪಂಚಾಯತ್ ವಠಾರಕ್ಕೆ ತಲುಪಿ ಎಕ ಕಾಲದಲ್ಲಿ ಎರಡು ಜಾಥಾ ಪಂಚಾಯತ್ ವಠಾರದಲ್ಲಿ ಸೇರಿಕೊಂಡಿತು.ಇಲ್ಲಿ ಧ್ವಜಾರೋಹಣ ಹಾರಿಸಿದ ನಂತರ ಸಿರಿಸೌಧ ದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಂ.ಆರ್.ಜಯಪ್ರಕಾಶ್ ಸ್ವಾಗತಿಸಿದರು .