ಅಜ್ಜಾವರದಲ್ಲಿ ನಡೆಯಿತು ತಿರಂಗಾ ನಡಿಗೆ

0

ಅದ್ದೂರಿಯಾಗಿ ನಡೆದ ಸ್ವಾತಂತ್ರ್ಯ ಅಮೃತಮಹೋತ್ಸವ

ಅಜ್ಜಾವರ ಗ್ರಾಮದ ವಿವಿಧ ಕಡೆಗಳಲ್ಲಿ ತಿರಂಗ ನಡಿಗೆ ಅದ್ದೂರಿಯಾಗಿ ನಡೆಯಿತು.

ಅಜ್ಜಾವರ ಪ್ರೌಢಶಾಲೆ, ಪ್ರತಾಪ ಯುವಕ ಮಂಡಲ ಹಾಗೂ ಗ್ರಾಮ್ ಒನ್ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಾವಿನಪಳ್ಳದಲ್ಲಿ ಧ್ವಜಾರೋಹಣ ನಡೆಯಿತು. ನಿವೃತ್ತ ಹೆಡ್ ಕಾನ್ ಸ್ಟೇಬಲ್ ಚಾಮಯ್ಯ ಅಡ್ಪಂಗಾಯ ಧ್ವಜಾರೋಹಣ ಗೈದರು.

ಬಳಿಕ ಅಜ್ಜಾವರ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಊರವರಿದ್ದು ತಿರಂಗಾರ ಮೆರವಣಿಗೆ ಅಜ್ಜಾವರ ಪ್ರೌಢಶಾಲಾ ವರೆಗೆ ನಡೆಯಿತು.

ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಧ್ಯಕ್ಷೆ ಸತ್ಯವತಿಯವರು ಧ್ವಜಾರೋಹಣ ಗೈದರು.

ಅಜ್ಜಾವರ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನಡೆದ ಬಳಿಕ ವಿದ್ಯಾರ್ಥಿಗಳು ಮತ್ತು ಊರವರಿದ್ದು ತಿರಂಗಾ ಮೆರವಣಿಗೆ ಅಜ್ಜಾವರ ರಸ್ತೆಯಲ್ಲಿ ನಡೆಯಿತು.

ಕಾಂತಮಂಗಲ ಶಾಲೆ ಯಲ್ಲಿ ಧ್ವಜಾರೋಹಣ ನಡೆದ ಬಳಿಕ ಕಾಂತಮಂಗಲ ದಲ್ಲಿ ತಿರಂಗಾ ನಡಿಗೆ ನಡೆಯಿತು.

(ಕಾಂತಮಂಗಲ ದಲ್ಲಿ ತಿರಂಗಾ ನಡಿಗೆ)