ಗಾಂಧಿನಗರ ಕೆಪಿಎಸ್ : ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

0

 

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧೀನಗರದಲ್ಲಿ ಅಮೃತಮಹೋತ್ಸವ ಸ್ವಾತಂತ್ರೋತ್ಸವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.

ದ್ವಜಾರೋಹಣವನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿದರು.

ಈ ವೇಳೆ ಕೆ.ಪಿ.ಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್, ಕಾಲೇಜ್ ಪ್ರಾಂಶುಪಾಲ ಅಬ್ದುಲ್ ಸಮದ್, ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎನ್.ಎ ರಾಮಚಂದ್ರ, ಜನತಾ ಗ್ರೂಪ್ ನ ಅಬ್ದುಲ್ ಹಮೀದ್, ಆರ್.ಕೆ ಮಹಮ್ಮದ್, ಜೆ.ಕೆ ರೈ, ಮಜೀದ್ , ಉಪ ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಎಲ್ಲಾ ಅದ್ಯಾಪಕರು. ಪೋಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು. ಅಮೃತ ಮಹೋತ್ಸವ ಅಂಗವಾಗಿ ಹಿಂದೆ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಿದ್ದು ಅದರಲ್ಲಿ ವಿಜೇತರಾದವರಿಗೆ ಇಂದು ಬಹುಮಾನ ವಿತರಿಸಲಾಯಿತು.

ಈ ಮೊದಲು ಪ್ರಾಥಮಿಕ ವಿಭಾಗದಲ್ಲಿ ಪ್ರಾಂಶು ಪಾಲ. ಸಮದ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಕೆ.ಪಿ.ಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್, ಉಪ ಪ್ರಾಂಶುಪಾಲ ಅರುಣ್ ಕುಮಾರ್ ಆರ್ ಕೆ., ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ. ಪದ್ಮನಾಭ., ಆರ್ ಕೆ.ಮಹಮ್ಮದ್, ಮಜೀದ್ ಮತ್ತು ಎಲ್ಲಾ ಅದ್ಯಾಪಕರು ವಿದ್ಯಾರ್ಥಿ ಗಳು ಹಾಜರಿದ್ದರು.

ಕಾರ್ಯಕ್ರಮ ಮುಗಿದ ನಂತರ ಎರಡು ಕಡೆ ಸಿಹಿ ತಿಂಡಿ ವಿತರಿಸಲಾಯಿತು.