ಶ್ರೀ ಶಾರದಾ ಸಮೂಹ ಸಂಸ್ಥೆ ಯಲ್ಲಿ 75ನೇ ಅಮೃತ ಸ್ವಾತಂತ್ರೋತ್ಸವದ ಕಾರ್ಯಕ್ರಮ

0

ಶ್ರೀ ಶಾರದಾ ಸಮೂಹ ಸಂಸ್ಥೆ ಯಲ್ಲಿ 75ನೇ ಅಮೃತ ಸ್ವಾತಂತ್ರೋತ್ಸವದ ಕಾರ್ಯಕ್ರಮ ನಡೆಯಿತು.

 

ದ ಕ ಗೌಡ ವಿದ್ಯಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ! ರೇವತಿ ನಂದನ್ ರವರು ಧ್ವಜಾರೋಹಣ ಗೈದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅಜಾದ್ ಕಿ ಅಮೃತ್ ಮಹೋತ್ಸವದ ಅಂಗವಾಗಿ ನಡೆದ ಗೀತ ಗಾಯನ, ಪ್ರಭಂದ, ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹೈಸ್ಕೂಲ್ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಸಂಸ್ಥೆ ಯ ಮುಖ್ಯಸ್ಥರಾದ ಶ್ರೀಮತಿ ದಯಮಾಣಿ, ಶ್ರೀಮತಿ ಭಾರತಿ, ಶ್ರೀಮತಿ ಜ್ಯೋತ್ಸ್ನ, ಮೂರೂ ಸಂಸ್ಥೆ ಯ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.