ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ

0

ಗ್ರಾ‌.ಪಂ. ವತಿಯಿಂದ ಗ್ರಾಮದ ಮಾಜಿ ಸೈನಿಕರುಗಳಿಗೆ ಸನ್ಮಾನ

ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ವಿಜೃಂಭಣೆಯಿಂದ ಆ.15ರಂದು ಆಚರಿಸಲಾಯಿತು.
ಅಮೃತ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.
ಗ್ರಾ.ಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು.


ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಕನಕಮಜಲಿನ ನಿವೃತ್ತ ಸೈನಿಕರುಗಳಾದ ಬಾಲಕೃಷ್ಣ ಮೂರ್ಜೆ, ಬಾಲಕೃಷ್ಣ ನಾಯ್ಕ ಪೆರುಂಬಾರು, ಪರಮೇಶ್ವರ ಗೌಡ ಕುತ್ಯಾಳ, ಭಾಸ್ಕರ ಕಾರಿಂಜ, ಜಯರಾಮ ಬೊಮ್ಮೆಟ್ಟಿ ಅವರುಗಳನ್ನು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಹಾಗೂ ಗ್ರಾ.ಪಂ. ಸದಸ್ಯರುಗಳು ಸೇರಿ ಸನ್ಮಾನಿಸಿ, ಗೌರವಿಸಿದರು.
ಉಳಿದಂತೆ ಬಾಲಕೃಷ್ಣ ಗೌಡ ಅಡ್ಕಾರು ಅವರ ಪರವಾಗಿ ಪತ್ನಿ ಶ್ರೀಮತಿ ರೇಖಾ ಅಡ್ಕಾರು, ಉಮೇಶ್ ಪಲ್ಲತ್ತಡ್ಕ ಅವರ ಪರವಾಗಿ ಪತ್ನಿ ಶ್ರೀಮತಿ ಪ್ರೇಮ ಪಲ್ಲತ್ತಡ್ಕ, ಚಿಂತನ್ ಅಕ್ಕಿಮಲೆ ಅವರ ಪರವಾಗಿ ಅವರ ತಂದೆ ವೆಂಕಟ್ರಮಣ ಅಕ್ಕಿಮಲೆ, ದಿ. ಹೊನ್ನಪ್ಪ ಗೌಡ ಕೊರಂಬಡ್ಕ ಅವರ ಪರವಾಗಿ ಅವರ ಸಹೋದರ ಈಶ್ವರ ಕೊರಂಬಡ್ಕ, ದಿ.ಚಂದ್ರಶೇಖರ ಕಾರಿಂಜ ಸಿ.ಆರ್.ಸಿ. ಅವರ ತಾಯಿ ಶ್ರೀಮತಿ ರಾಮಾಯಿ ಅವರುಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ‌. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯರುಗಳಾದ ಇಬ್ರಾಹಿಂ ಕಾಸಿಂ ಕನಕಮಜಲು, ಶ್ರೀಮತಿ ಶಾರದಾ ಉಗ್ಗಮೂಲೆ, ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಶ್ರೀಮತಿ ಸುಮಿತ್ರ ಕುತ್ಯಾಳ, ರವಿಚಂದ್ರ ಕಾಪಿಲ, ಸಂಜೀವಿನಿ ಸಂಘದ ಎಂ.ಬಿ.ಕೆ. ಶ್ರೀಮತಿ ಭವಾನಿ ಮಾಣಿಮಜಲು, ಗ್ರಾ.ಪಂ. ಗ್ರಂಥಪಾಲಕಿ ಶ್ರೀಮತಿ ನಮಿತ ಕಾರಿಂಜ, ಮಾಜಿ ತಾ.ಪಂ. ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಮಾಜಿ ಗ್ರಾ.ಪಂ. ಅಧ್ಯಕ್ಷರುಗಳಾದ ಗೋಪಾಲಕೃಷ್ಣ ಕುತ್ಯಾಳ, ವಸಂತ ಗಬ್ಬಲಡ್ಕ, ಕನಕಮಜಲು ಪ್ರಾ. ಕೃ.ಪ‌.ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರುಗಳಾದ ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಪ್ರೇಮ ಪಲ್ಲತ್ತಡ್ಕ, ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು, ಹೇಮಂತ್ ಮಠ, ಕನಕಮಜಲು, ಹೇಮಚಂದ್ರ ಕುತ್ಯಾಳ, ಶ್ರೀಮತಿ ಸುಮತಿ ಕುತ್ಯಾಳ, ಕನಕಮಜಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಮೀದ್ ಕನಕಮಜಲು, ಶಾಲಾ ಶಿಕ್ಷಕ ಮೋಹನ್ ಸಾರಕೂಟೇಲು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾ.ಪಂ‌. ಕಾರ್ಯದರ್ಶಿ ರಮೇಶ್, ಸಿಬ್ಬಂದಿಗಳಾದ ಪ್ರಭಾಕರ ಕಂಚಿಲ್ಪಾಡಿ, ಲವಕುಮಾರ ಮಾಣಿಕೋಡಿ, ಗೋಪಾಲ ಪಂಜಿಗುಂಡಿ, ಸತೀಶ್ ಬೊಮ್ಮೆಟ್ಟಿ, ಪುನರ್ವಸತಿ ಕಾರ್ಯಕರ್ತ ವೆಂಕಟ್ರಮಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.