ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಣೆ

0

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ. 15ರಂದು ಸ್ವಾತಂತ್ರ‍್ಯ ಅಮೃತ ಮಹೋತ್ಸವ ದಿನಾಚರಣೆಯನ್ನು ನಿವೃತ್ತ ಎಸ್.ಜಿ.ಟಿ. ವಾಯುದಳ ಸೇನಾಧಿಕಾರಿ ಅಡ್ಡಂತಡ್ಕ ದೇರಣ್ಣ ಗೌಡ ಧ್ವಜಾರೋಹಣಮಾಡುವುದರೊಂದಿಗೆ ಆಚರಿಸಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಅಡ್ಡಂತಡ್ಕರವರು ಯುವಜನತೆ, ಸತ್ಯನಿಷ್ಠೆ ಹಾಗೂದೇಶಭಕ್ತಿಯನ್ನು ಮೈಗೂಡಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಗೆ ಕಾರಣೀಭೂತರಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎ.ಒ.ಎಲ್.ಇ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ಇಂದು ಭಾರತದಲ್ಲಿ ಸ್ವಾತಂತ್ರ‍್ಯ ದಿನ ಮತ್ತು ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇಂದು ನಾವು ಮೊದಲು ಈ ದೇಶವನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಎಲ್ಲವನ್ನು ಪಣಕಿಟ್ಟ ಸ್ವಾತಂತ್ರಕ್ಕಾಗಿ ಹೋರಾಡಿದವೀರರನ್ನು ಸ್ಮರಿಸಬೇಕಾಗಿದೆಎಂದು ಯುವಜನತೆಗೆ ಕರೆ ನೀಡಿದರು. 

ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ ಹಾಗೂ ಪ್ರಾಂಶುಪಾಲರು ಡಾ. ಸುರೇಶ ವಿ., ವಿ.ಟಿ.ಯು. ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್- ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಉಮಾಶಂಕರ್ ಕೆ.ಎಸ್.,ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ವಿಭಾಗ ಮುಖ್ಯಸ್ಥ ಡಾ. ಕುಸುಮಾಧರ ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗು ಡೀನ್-ಎಕ್ಸಾಮಿನೇಶನ್ ಡಾ. ಪ್ರವೀಣ ಎಸ್.ಡಿ., ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದಡಾ. ಸುರೇಖ ಎಂ., ಟ್ರೈನಿಂಗ್ & ಪ್ಲೇಸ್ ಮೆಂಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ.,ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್., ಡೀನ್-ಹಾಸ್ಟೆಲ್ ಡಾ. ಭಾಗ್ಯ ಹೆಚ್.ಕೆ., ಡೈರೆಕ್ಟರ್ ಆಫ್ ಪಿ.ಜಿ. ಸ್ಟಡೀಸ್ ಡಾ. ಸವಿತಾ ಎಂ., ಡೀನ್-ರೀಸರ್ಚ್ ಡಾ. ಸವಿತಾ ಸಿ.ಕೆ., ಎನ್.ಎಸ್.ಎಸ್. ಘಟಕಾಧಿಕಾರಿ ಹಾಗೂ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಪ್ರಜ್ಞ ಎಂ.ಆರ್., ವಿದ್ಯಾರ್ಥಿಕ್ಷೇಮಾಧಿಕಾರಿ ಪ್ರೊ. ಲೋಕೇಶ್ ಪಿ.ಸಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಭಾಸ್ಕರ್ಎಸ್. ಬೇಲೆಗದ್ದೆ, ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಮತ್ತು ಇತರ ಬೋಧಕಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳುಉಪಸ್ಥಿತರಿದ್ದರು.