ಪಂಜ ಗ್ರಾಮಪಂಚಾಯತ್ ವತಿಯಿಂದ ಸ್ವಾತಂತ್ರ್ಯೋತ್ಸವ

0

 

ಪಂಜ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಆ.15 ರಂದು ಜರುಗಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಅಧ್ಯಕ್ಷತೆ ವಹಿಸಿ ಧ್ವಜಾರೋಣಗೈದು ಮಾತನಾಡಿದರು.

 

 

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಕಲ್ಲಾಜೆ, ಸದಸ್ಯರಾದ ಜಗದೀಶ್ ಪುರಿಯ,ನಾರಾಯಣ ಕೃಷ್ಣನಗರ, ಬಿ ಲಕ್ಷ್ಮಣ ಗೌಡ ಬೊಳ್ಳಾಜೆ,ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ , ಶ್ರೀಮತಿ‌ ದಿವ್ಯಾ ಪುಂಡಿಮನೆ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಪ್ರಮೀಳಾ ಸಂಪ, ಶ್ರೀಮತಿ ವೀಣಾ ಪಂಜ, ಶ್ರೀಮತಿ ವಿಜಯಲಕ್ಷ್ಮಿ,ಕಾರ್ಯದರ್ಶಿ ಪದ್ಮಯ್ಯ ಕೆ , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ,ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪದ್ಮಯ್ಯ ಕೆ ಸ್ವಾಗತಿಸಿದರು ಮತ್ತು ವಂದಿಸಿದರು.