ಕಲ್ಮಡ್ಕ ಗ್ರಾ.ಪಂ.ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

0

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ಆ.15ರಂದು ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್ ನೆರವೇರಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಕೆ.ಎಸ್ ಸ್ವಾಗತಿಸಿದರು.

ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ನಾಯ್ಕ ಬೊಳಿಯೂರು, ಪವಿತ್ರ ಕುದ್ವ, ಹರೀಶ್ ಮಾಳಪ್ಪಮಕ್ಕಿ, ಮೀನಾಕ್ಷಿ ಕೆ, ಮೋಹಿನಿ ಎಂ, ಜಯಲತ ಕೆ.ಡಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಹಮ್ಮದ್ ಹನೀಫ್, ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಕಾರ್ಯಪ್ಪ ಗೌಡ, ಎಸ್.ಡಿ.ಎಂ.ಸಿ ಪಡ್ಪಿನಂಗಡಿ ಶಾಲಾ ಅಧ್ಯಕ್ಷರಾದ ಮೇದಪ್ಪ ಗೌಡ ಅಲೆಂಗಾರ, ನಿವೃತ್ತ ಮುಖ್ಯೋಪಾಧ್ಯಯರಾದ ವಾಸುದೇವ ನಡ್ಕ, ನಿವೃತ್ತ ಮುಖ್ಯೋಪಾಧ್ಯಾಯರು ಕಮಲ ನಡ್ಕ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ, ಪಡ್ಪಿನಂಗಡಿ ಅಂಗವಾಡಿ ಕಾರ್ಯಕರ್ತೆ ಲೀಲಾವತಿ, ಇಸ್ಮಾಯಿಲ್ ಪಡ್ಪಿನಂಗಡಿ, ಹಮೀದ್ ಮರಕ್ಕಡ, ಜಯರಾಜ್ ನಡ್ಕ, ಕಲ್ಮಡ್ಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಧನಲಕ್ಷ್ಮೀ ಹಾಗೂ ಸದಸ್ಯರುಗಳು, ಗ್ರಂಥಪಾಲಕಿ ಜಯ ಸಿ.ಕೆ, ಕ್ಲಾಸಿಕ್ ಸ್ಫೋಟ್ಸ್ ಕ್ಲಬ್ ನ ಅಧ್ಯಕ್ಷರಾದ ಅಶ್ರಫ್ ಹಾಗೂ ಸದಸ್ಯರುಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಪಡ್ಪಿನಂಗಡಿ ಶಾಲಾ ಮಕ್ಕಳು ಹಾಗೂ ಊರವರು ಉಪಸ್ಥಿತರಿದ್ದರು ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ ವಂದಿಸಿದರು.

LEAVE A REPLY

Please enter your comment!
Please enter your name here