ರಿಫಾಯಿಯ ಜುಮ್ಮಾ ಮಸ್ಜಿದ್ ಸಮಹಾದಿ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

0

 

ಸಮಹಾದಿ,ಆಗಸ್ಟ್ 15:-75 ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಮಹಾದಿ ಮುರುಳ್ಯ ರಿಫಾಯಿಯ ಜುಮ್ಮಾ ಮಸ್ಜಿದ್ ವತಿಯಿಂದ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ ರವರು ನೆರವೇರಿಸಿದರು.

ಮಸೀದಿ ಖತೀಬರಾದ ಬಹು! ರಫೀಕ್ ನಿಝಮಿ ಖತೀಬರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿ ಶುಭಾಶಯ ಕೋರಿದರು.
ವಿಧ್ಯಾರ್ಥಿಗಳು ಭಕ್ತಿ ಗೀತೆ ಹಾಗೂ ಭಾಷಣಗಳು ನಡೆಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಸಾದಿಕ್ ಸಮಹಾದಿ,ಉಪಾಧ್ಯಕ್ಷರಾದ ಆದಂ ಕುಂಞಿ, ಕಾರ್ಯದರ್ಶಿ ಗಳಾದ ಫಲುಲ್ ,ಸೈಫುದ್ದೀನ್,ಕೋಶಾದಿಕಾರಿ ಉಮ್ಮರ್ ಫಾರೂಕ್,ಸಮಿತಿ ಸದಸ್ಯರಾದ ಪಿ.ಎಂ.ಅಬ್ದುಲ್ ರಹ್ಮಾನ್ ,ಸಾಬುಕುಂಞಿ,ಸಿನಾನ್,ಹನೀಫ್,ಮುಸ್ತಫಾ ಹಾಗೂ ಹಿರಿಯರಾದ ಹಸನ್ ಕುಂಞಿ,ಅಬೂಬಕ್ಕರ್ ರಾಗಿಪೇಟೆ,ಮಹಮ್ಮದ್ ರಾಗಿಪೇಟೆ ಸೇರಿದಂತೆ ಮದ್ರಸ ವಿಧ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.
SSF ಸಮಹಾದಿ ಶಾಖೆ ಅಧ್ಯಕ್ಷರಾದ ನೌಫಲ್ ರವರು ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here