ಕೋನಡ್ಕಪದವು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಆಚರಣೆ

0

ಜಾಲ್ಸೂರು ಗ್ರಾಮದ ಕೋನಡ್ಕ ಪದವು ಅಂಗನವಾಡಿ ಕೇಂದ್ರದಲ್ಲಿ ಅಮೃತ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15ರಂದು ಆಚರಿಸಲಾಯಿತು.
ಕೆ. ಎಫ್. ಡಿ. ಸಿ. ನಿವೃತ್ತ ಮ್ಯಾನೇಜರ್ ರಂಗನಾಥ್ ಅವರು ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಜಯ ಅಡ್ಕಾರು, ಶ್ರೀಮತಿ ಸಾವಿತ್ರಿ ಗೋಪಾಲ ಅಡ್ಕಾರುಬೈಲು, ಜಾಲ್ಸೂರು ಬಿ. ಎಂ. ಎಸ್. ಅಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಗೋಪಾಲ ಪದವು, ಶರತ್ ಅಡ್ಕಾರು, ಚೈತ್ರ ಅಡ್ಕಾರು, ಲಿಂಗಪ್ಪ ಗೌಡ ಮೂರ್ಜೆ, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ನಳಿನಿ ಎ.ಎಸ್. ಆಶಾ ಕಾರ್ಯಕರ್ತೆ ಕುಸುಮಾವತಿ ಹಾಗೂ ಮಕ್ಕಳ ಪೋಷಕರು, ತಾಯಂದಿರು ಹಳೇವಿದ್ಯಾರ್ಥಿಗಳು, ಅಂಗನವಾಡಿ ಕೇಂದ್ರದ ಪುಟಾಣಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿದ್ದು, ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಬಹುಮಾನವನ್ನು ಹಾಗೂ ಗೋಪಾಲ ಪದವು ಅವರು ಪ್ರೋತ್ಸಾಹಕ ಬಹುಮಾನವನ್ನು ನೀಡಿ ಸಹಕರಿಸಿದರು.
ಆಗಮಿಸಿದ ಗಣ್ಯರ ಸಮ್ಮುಖದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ನೆನಪಿಗಾಗಿ ಅಂಗನವಾಡಿ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಿವೇದಿತಾ ಅವರು ಸ್ವಾಗತಿಸಿ, ಪ್ರಾರ್ಥಿಸಿ, ವಂದಿಸಿದರು. ಸಹಾಯಕಿ ಶಾರದಾ ಸಹಕರಿಸಿದರು.

LEAVE A REPLY

Please enter your comment!
Please enter your name here