ಪೈಚಾರು: ಕುವ್ವತ್ತುಲ್ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಜಾಲ್ಸೂರು ಗ್ರಾಮದ ಪೈಚಾರು ಕುವ್ವತ್ತುಲ್ ಇಸ್ಲಾಂ ಮದರಸದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವವನ್ನು ಆ.15ರಂದು ಆಚರಿಸಲಾಯಿತು.


ಬದ್ರಿಯ ಜುಮಾ ಮಸೀದಿ ಖತೀಬ್ ಮುನೀರ್ ಸಖಾಫಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಧ್ವಜಾರೋಹಣವನ್ನು ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಪಿ. ಯವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್, ಕುವ್ವತ್ತುಲ್ ಮದರಸದ ಮುಹಲ್ಲಿಮ್ ಮುಯ್ಯದ್ದೀನ್ ಲತೀಫಿ‌,
ಬದ್ರಿಯ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ, ಕಾರ್ಯದರ್ಶಿ ಹನೀಫ್ ಪಿಕೆ, ಡಾ.ಬಶೀರ್ ಆರ್‌ ಬಿ., ಜಮಾಹತ್ ಸದಸ್ಯರುಗಳು, ಹಾಗೂ ಸ್ಥಳೀಯರು ಸೇರಿದಂತೆ ವಿಧ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.