ಜಯನಗರ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ

0

 

ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿ (ಎಸ್ 6)ವತಿಯಿಂದ ನಿವೃತ್ತ ಮತ್ತು ಕರ್ತವ್ಯ ನಿರತ ಸೇನಾನಿಗಳಿಗೆ ಸನ್ಮಾನ

ಸುಳ್ಯ ಜಯನಗರ ಸರ್ಕಾರಿ ಶಾಲೆಯಲ್ಲಿ ಸ್ವತಂತ್ರೋತ್ಸವದ ಅಮೃತ ಮಹೋತ್ಸವ ಇಂದು ನಡೆಯಿತು.


ಈ ಕಾರ್ಯಕ್ರಮದಲ್ಲಿ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿ ವತಿಯಿಂದ ನಿವೃತ್ತ ಮತ್ತು ಕರ್ತವ್ಯ ನಿರತ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಲಾವಣ್ಯ ಜಯನಗರ ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿ ವತಿಯಿಂದ ಜಯನಗರ ಪರಿಸರದಲ್ಲಿರುವ ನಿವೃತ್ತ ಸೇನಾನಿಗಳು ಮತ್ತು ಸೇವೆಯಲ್ಲಿರುವ ಸೇನಾನಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ವೀಣಾ ಕೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಶಿಕ್ಷಕಿ ಮಮತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಸೇನಾನಿಗಳು ಜಯನಗರ ನಿವಾಸಿಗಳಾದ ಗಣಪ, ಯೋಗೀಶ್ ಭರತ್, ರಾಮಚಂದ್ರ ಭಟ್, ಸೇನೆಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ಲೋಕೇಶ್ ಎ ಎಸ್ ರವರ ಪತ್ನಿ ಚಂದ್ರಿಕಾ ರವರನ್ನು ಶಾರದಾಂಬ (ಎಸ್ 6) ಸಮಿತಿ ಅಧ್ಯಕ್ಷ ಚಿದಾನಂದ, ಪದಾಧಿಕಾರಿಗಳು ಸದಸ್ಯರು ಸನ್ಮಾನಿಸಿದರು. ಶಾಲಾ ವಿದ್ಯಾರ್ಥಿಗಳು ವೀರಸೇನಾನಿ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ರವರ ಜೀವನದ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳು ಚಪ್ಪಾಳೆ ಪದ್ಯ ಹಾಡಿ ಸಂಗೀತದ ಮೂಲಕ ದೇಶದ ಸೇನಾನಿಗಳನ್ನು ಗೌರವಿಸಿ ಪ್ರೋತ್ಸಾಹಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ವೇದಿಕೆಯಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯರುಗಳಾದ ಶಿಲ್ಪಾ ಸುದೇವ್, ಬಾಲಕೃಷ್ಣ ಭಟ್ ಕೊಡಂಕೇರಿ, ರೋಹಿತ್ ಕೊಯಿಂಗೋಡಿ, ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮುದ್ದಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಆಕರ್ಷಕ ವಾದ್ಯಗಳ ಮೂಲಕ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕ ವೃಂದದವರು, ಸ್ಥಳೀಯ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here