ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

0

ಅಂಗನವಾಡಿ ಕೇಂದ್ರ ಮಾಸ್ತಿಕಟ್ಟೆ (ತಡಗಜೆ)ಯಲ್ಲಿ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಧ್ವಜಾರೋಹಣವನ್ನು ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಭಾರತಿ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಚಂದ್ರ ಹೆಗ್ಡೆ ,ಶ್ರೀಮತಿ ಜಯಶ್ರೀ, ಶ್ರೀಮತಿ ವೀಣಾ , ಕುಲಾಲ ಸಂಘದ ನಿರ್ದೇಶಕರಾದ ನಾಗೇಶ್ ಕುಲಾಲ, ಬಾಲವಿಕಾಸ ಸಮಿತಿಯ ಸದಸ್ಯರು, ವಿರಾಟ್ ಫ್ರೆಂಡ್ಸ ಕ್ಲಬ್ ಬೆಳ್ಳಾರೆ ಇದರ ಸದಸ್ಯರು, ಶ್ರೀ ಶಕ್ತಿ ಗುಂಪಿನ ಅಧ್ಯಕ್ಷರು, ಆಶಾ ಕಾರ್ಯಕರ್ತೆ ಶ್ರೀಮತಿ ಗೀತಾ ಹಾಗೂ ಎ ಸದಸ್ಯರು, ಪೋಷಕರು ಮತ್ತು ಎಲ್ಲಾ ಪುಟಾಣಿಗಳು ಹಾಜರಿದ್ದರು.
ಜೆ ಸಿ ಐ ಬೆಳ್ಳಾರೆ ಹಾಗೂ ಉದಯ್ ಪಾಟಳಿ ಅವರಿಂದ ಸಿಹಿ ತಿಂಡಿ ವಿತರಿಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಇಂದಿರಾ.ಕೆ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಹಾಯಕಿಯಾದ ಗುಲಾಬಿ ಇವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here