ಎಣ್ಮೂರು:ಮುಸ್ಲಿಂ ಯುವಜನ ಸಂಘದ ವತಿಯಿಂದ ಅಮೃತಮಹೋತ್ಸವ

0

 

ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ವತಿಯಿಂದ ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇಲ್ಲಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸಲಾಯಿತು.

 

ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಅಧ್ಯಕ್ಷರಾದ ಟಿ. ಎಸ್. ಸುಲೈಮಾನ್ ರವರು ಧ್ವಜಾರೋಹಣಗೈದರು. ಮಸೀದಿಯ ಖತೀಬರಾದ ಅಲ್ ಹಾಜ್ ಅಬ್ದುಲ್ಲ ಮದನಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಣ್ಮೂರು ಉರೂಸ್ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಮುಸ್ತಫಾ ಸಅದಿಯವರು ದಿಕ್ಸೂಚಿ ಭಾಷಣಗೈದರು.

ಎಣ್ಮೂರು ಮದರಸ ಮುಅಲ್ಲಿಂ ಶಂಸುದ್ದೀನ್ ಫಾರೂಕಿ, ಎಣ್ಮೂರು ಜುಮ್ಮಾ ಮಸೀದಿಯ ಕಾರ್ಯದರ್ಶಿ ಹಮೀದ್ ಮರಕ್ಕಡ, ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಕೊಳತಂಕರೆ, ಕಲ್ಮಡ್ಕ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಎಂ.ಕೆ.ಹನೀಫ್ ಉಪಸ್ಥಿತರಿದ್ದರು.

ಎಣ್ಮೂರು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯರು, ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯರು, ಮುಚ್ಚಿಲ ಮುನವ್ವಿರುಲ್ ಇಸ್ಲಾಂ ಮದರಸ ಸಮಿತಿಯ ಸದಸ್ಯರು, ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ಇದರ ಕಾರ್ಯಕಾರಿ ಸಮಿತಿ ಸದಸ್ಯರು .ಹಾಗೂ ಊರಿನ ಹಿರಿಯರು, ಮಹನೀಯರು, ಎಣ್ಮೂರು ಹಿದಾಯತ್ ಸ್ಸಿಬಿಯಾನ್ ಮದರಸದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಸ್ಲಿಂ ಯುವಜನ ಸಂಘ ಎಣ್ಮೂರು-ಐವತ್ತೊಕ್ಲು ಇದರ ಅಧ್ಯಕ್ಷರಾದ ರಫೀಕ್ ಐವತ್ತೊಕ್ಲು ರವರು ಸ್ವಾಗತಿಸಿ, ಕಾರ್ಯದರ್ಶಿ ಇಸ್ಮಾಯಿಲ್ ಉಜಿರಿಗುಂಡಿರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here