ಸ್ನೇಹದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂಭ್ರಮ

0

 

ಸ್ವಾತಂತ್ರ್ಯ ಮತ್ತು ಶಿಸ್ತು ಪರಸ್ಪರ ಪೂರಕ: ಡಾ.ದಾಮ್ಲೆ

 

“ಸ್ವಾತಂತ್ರ್ಯದೊಂದಿಗೆ ನಮ್ಮ ಜೀವನದಲ್ಲಿ ನಾವು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯವೆಂದರೆ ಸ್ವಚ್ಛಂದತೆಯಲ್ಲ. ದೇಶದ ಸಮಷ್ಟಿ ಸ್ವಾತಂತ್ರ್ಯದೊಳಗೆ ನಮ್ಮ ವ್ಯಷ್ಟಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ದೇಶ ನಿರಂತರ ಚಟುವಟಿಕೆಯಿಂದ ಕೂಡಿದ್ದು ಯಾವಾಗಲೂ ಯಶಸ್ಸಿನತ್ತ ಸಾಗುತ್ತಿದೆ. ಸ್ವಾತಂತ್ರ್ಯದ ಪ್ರಜ್ಞೆ ಮಕ್ಕಳ ವ್ಯಕ್ತಿತ್ವದಲ್ಲಿ ನಿರಂತರ ಹರಿಯುತ್ತಿರಲಿ” ಎಂಬುದಾಗಿ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು.
ಅವರು 75ನೇ ಅಮೃತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮೂಕಮಲೆ ಚಂದ್ರಶೇಖರವರು ಮಾತನಾಡಿ ಮಕ್ಕಳ ಶಿಸ್ತಿನ ಬಗ್ಗೆ ಶ್ಲಾಘಿಸಿದರು. ನಂತರ ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಉಪಸಿತರಿದ್ದರು. ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕ ದೇವಿ ಪ್ರಸಾದ ಜಿ.ಸಿ ಸ್ವಾಗತಿಸಿ ಶಿಕ್ಷಕಿ ಶ್ರೀಮತಿ ಜಯಂತಿ ಕೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ಪೋಷಕರು ಹಾಗೂ ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಶಾಲಾ ಶಿಕ್ಷಕ ದೇವಿ ಪ್ರಸಾದ ಜಿ.ಸಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here