ಬಾಳಿಲ ಮಸೀದಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

0

ಮೊಹಿಯುದ್ದೀನ್ ಜುಮ್ಮಾ ಮಸೀದಿ ಅತ್ತಿಕರಮಜಲು ಪಾಜಪಳ್ಳ, ಬಾಳಿಲ ಇದರ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತೋತ್ಸವದ ಪ್ರಯುಕ್ತ ಅತ್ತಿಕರಮಜಲು ಮಸೀದಿ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ಶರೀಫ್ ಭಾರತ್ ಅವರು ಸ್ವಾತಂತ್ರೋತ್ಸವದ ಕುರಿತು ಸಂದೇಶ ಭಾಷಣ ಮಾಡುವುದರ ಜೊತೆಗೆ ಅತಿಥಿಗಳನ್ನು ಸ್ವಾಗತಿಸಿದರು. ಜಮಾಅತ್ ಕಮೀಟಿ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಮಸೀದಿ ಖತೀಬರಾದ ಯಾಸಿರ್ ಅರಾಫತ್ ಕೌಸರಿ ಶುಭ ನುಡಿಗಳ ಜೊತೆಗೆ ದುವಾ ನೆರವೇರಿಸಿದರು. ಮುಅದ್ದಿನ್ ಉಸ್ತಾದರಾದ ಝುಬೈರ್ ಮುಸ್ಲಿಯಾರ್, ಮದ್ರಸದ ವಿದ್ಯಾರ್ಥಿಗಳು ಹಾಗೂ ಜಮಾಅತ್ ಕಮೀಟಿಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಜಮಾಅತ್ ಬಾಂಧವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here