ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ SSF ಗೂನಡ್ಕ ಯುನಿಟ್  ವತಿಯಿಂದ 75 ನೇ ಸ್ವಾತಂತ್ರರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ 

0

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ SSF ಗೂನಡ್ಕ ಯುನಿಟ್ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಸುನ್ನಿ ಸೆಂಟರ್ ಗೂನಡ್ಕ ಇದರ ವಠಾರದಲ್ಲಿ ನಡೆಯಿತು ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಮಹಮ್ಮದಲಿ ಸಖಾಫಿ ಮಾದಾಪುರ ಉಸ್ತಾದರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉನೈಸ್ ಗೂನಡ್ಕ ರವರು ವಹಿಸಿಸಿದರು. SSF ಸುಳ್ಯ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿಯಾದ ಇಜಾಸ್ ಗೂನಡ್ಕರವರು ಬಂದಂತಹ ಸರ್ವರನ್ನು ಸ್ವಾಗತಿಸಿದರು.SYS ಗೂನಡ್ಕ ಬ್ರಾಂಚ್ ಅಧ್ಯಕ್ಷರಾದ ಹನೀಫ್ ಝಇನಿ ಉಸ್ತಾದರು ದ್ವಜರೋಹಣವನ್ನು ನೆರವೇರಿಸಿದರು.ಡಾ. ಉಮ್ಮರ್ ಬೀಜದಕಟ್ಟೆ ಗೂನಡ್ಕ ರವರು 75 ನೇ ಸ್ವಾತಂತ್ರ್ಯತ್ಸವದ ಸಂದೇಶ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ಲ ಹಾಜಿ ಕೊಪ್ಪತಕಜೆ, ಹಾರಿಸ್ ಬೆಂಗಳೂರು, SSF ದ. ಕ ಈಸ್ಟ್ ಜಿಲ್ಲಾ ಕೋಶಧಿಕಾರಿ ಸಿದ್ದೀಕ್ ಗೂನಡ್ಕ, ಪಂಚಾಯತ್ ಸದಸ್ಯರುಗಳಾದ ಅಬುಶಾಲಿ ಗೂನಡ್ಕ, ಶವಾದ್ ಗೂನಡ್ಕ, ಅಲ್ ಅಮೀನ್ ವೆಲ್ಫೇರ್
ಅಸೋಸಿಯೇಷನ್ ಗೂನಡ್ಕ ಅಧ್ಯಕ್ಷರಾದ ಜಾಫರ್ ಸ್ವಾದಿಕ್ ಗೂನಡ್ಕ, ಎ ಟಿ ಅಶ್ರಫ್, ಅಯ್ಯುಬ್ ಗೂನಡ್ಕ, ತಾಜುದ್ದೀನ್ ಗೂನಡ್ಕ,ಇಬ್ರಾಹಿಂ ಗೂನಡ್ಕ,ಮುನೀರ್ ಗೂನಡ್ಕ ಹಾರಿಸ್ ಗೂನಡ್ಕ, ಜಾಬಿರ್ ಗೂನಡ್ಕ,ಡಿ ಆರ್ ಖಾದರ್ ರವರು ಉಪಸ್ಥಿತರಿದ್ದರು.
ಹಾಗೂ SYS SSF SYS ಗೂನಡ್ಕ ಇದರ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಪಾನಿಯ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.