ಎಸ್ ಎಸ್ ಎಫ್  ಗಾಂಧಿನಗರ ಶಾಖಾ ವತಿಯಿಂದ 75 ನೇ ಬಾರತದ ಸ್ವಾತಂತ್ರ್ಯದ ಅಮ್ರತ ಮಹೋತ್ಸವ ಸಮಾರಂಭ

0

 

ಆಗಸ್ಟ್ 15 ಸೋಮವಾರ 7:30ರ ಬೆಳಗ್ಗೆ ಸುನ್ನಿ ಸೆಂಟರ್ ವಠಾರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ SSF ಗಾಂಧಿನಗರ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಳು ರವರ ನೇತೃತ್ವದಲ್ಲಿ ನಡೆಯಿತು.


ಧ್ವಜಾರೋಹಣವನ್ನು ದ.ಕ ವಕ್ಫ್ ಮಂಡಳಿಯ ಸಲಹಾ ಸಮಿತಿಯ ಇದರ ಉಪಾಧ್ಯಕ್ಷರಾದ ಜನಾಬ್ ಅಬ್ದುಲ್ ರಹ್ಮಾನ್ ಮೊಗರ್ಪಣೆ ನೆರವೇರಿಸಿ ಭಾರತದ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮುಸ್ಲಿಂ ಹೋರಾಟಗಾರರ ಸಂಗ್ರಾಮದ ಕುರಿತು ಹಿತ ವಚನ ನೀಡಿದರು.
ದುವಾ ದ ಮೂಲಕ ಲತೀಫ್ ಸಖಾಫಿ ಕೆರೆಮೂಲೆ ದನ್ಯಗೂಳಿಸಿದರು,ಗಾಂಧಿನಗರ ಕ್ಯಾಂಪಸ್ ಕಾರ್ಯದರ್ಶಿಗಳಾದ ಸಲ್ಮಾನ್ ಪಾರಿಸ್ ಹಾಗೂ ಮುಸ್ತಫಾ ಗಾಂಧಿನಗರ ದೇಶ ಭಕ್ತಿ ಗೀತೆ ಹಾಡಿದರು,ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಹಾಜಿ ಕೆ.ಎಮ್ ಮುಸ್ತಫಾ ಜನತಾ,ಹಾಜಿ ಅಬ್ದುಲ್ ಶುಕೊರು,ಹಾಜಿ ಮುಹಮ್ಮದ್ ಕೆ.ಎಮ್.ಎಸ್,ನ.ಪಂ ಸದಸ್ಯರುಗಳಾದ ಕೆ.ಎಸ್ ಉಮ್ಮರ್,ರಿಯಾಝ್ ಕಟ್ಟೆಕ್ಕಾರ್,ಹಾಜಿ ಅಬ್ದುಲ್ ಖಾದರ್ ಪಾರೆ,SYS ಗಾಂಧಿನಗರ ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕ್ಕಾರ್,ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಅಝೀಝ್ ಫೋಟ್ ವೇರ್, ಮಹಮ್ಮದ್ ಕಲ್ಲುಮುಟ್ಳು, ಮಹಮ್ಮದ್ ಪೈಂಟರ್, ಅಬೂಬಕ್ಕರ್ ವೈಟ್, ರಹೀಂ ನಾರ್ಕೋಡು,ಕಬೀರ್ ಜಟ್ಟಿಪ್ಪಳ್ಳ,ಕಬೀರ್ ಗುರುಂಪು,ಜಮಾಲು ಗುರುಂಪು, ಮುನೀರ್ ಜಿ.ಕೆ, ಸಫ್ವಾನ್ ಸುಣ್ಣಮೂಲೆ, ಸಿದ್ದೀಕ್ ಎಲಿಮಲೆ, ಸೆಕ್ಟರ್ ಅಧ್ಯಕ್ಷರಾದ ಬಶೀರ್ ಕಲ್ಲುಮುಟ್ಳು,ಅಬ್ದುಲ್ ನಾಫಿ,ಮಫಾಝ್ ಕಲ್ಲುಮುಟ್ಳು,ಸಲ್ಮಾನ್ ನಾವೊರು,ಮಹಮ್ಮದ್ ಕಾರ್ಯಕ್ರಮದ ಗಣ್ಯ ಉಪಸ್ಥಿತರಿದ್ದರು.ಸುಳ್ಯ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಬಿ.ಎ ನಿರೂಪಿಸಿ,ಗಾಂಧಿನಗರ SSF ಕಾರ್ಯದರ್ಶಿ ಆರಿಫ್ ಬುಶ್ರ ಬಾಗವಹಿಸಿದ ಎಲ್ಲರಿಗೂ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here