ನಿಂತಿಕಲ್ಲು : ವರ್ತಕರು ಮತ್ತು ಸಾರ್ವಜನಿಕರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0

ನಿಂತಿಕಲ್ ಪೇಟೆಯ ವರ್ತಕರು ಮತ್ತು ರಿಕ್ಷಾ ಚಾಲಕ ಮಾಲಕರು ಹಾಗು ಸಾರ್ವಜನಿಕರು ಒಟ್ಟು ಸೇರಿ ನಿಂತಿಕಲ್ ಧರ್ಮಶ್ರೀ ಆರ್ಕೇಡ್ ನಲ್ಲಿ ವಿಜ್ರಂಭನೆಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
​ಧ್ವಜಾರೋಹಣವನ್ನು ಕೋಟಿ ಚೆನ್ನಯ ಆದಿ ಬೈದರ್ಕಳ ಗರಡಿ ಎಣ್ಮೂರಿನ ಅನುವಂಶಿಕ ಮೊಕ್ತೆಸರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ನೆರವೇರಿಸಿ ಶುಭ ಹಾರೈಸಿದರು .ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರು ವೃದ್ಧಿ ಕಾಂಪ್ಲೇಕ್ಸ್ ಮಾಲಕ ವೆಂಕಪ್ಪ ಗೌಡ ಆಲಾಜೆ, ಮಾಜಿ ತಾಲೂಕು ಪಂ.ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ ಹಾಗು ಸೀತಾರಾಮಾಂಜನೇಯ ಭಜನಾ ಮಂದಿರ ಎಣ್ಮೂರು ಇದರ ಅಧ್ಯಕ್ಷರಾದ ಕೆ.ಎನ್.ರಘುನಾಥ ರೈ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮಶ್ರೀ ಆರ್ಕೇಡ್ ನ ಮಾಲಕರಾದ ದೀಕ್ಷಿತ್ ಗೌಡ ಕಾಮಧೇನು ಉಪಸ್ಥಿತರಿದ್ದರು.
​ಡಿಂಪಲ್ ಡಿಜಿಟಲ್ ಸೇವಾ ಕೇಂದ್ರದ ಮಾಲಕರಾದ ಎನ್ ಟಿ ವಸಂತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ಗೌಡ ಕಾಮಧೇನು ವಂದಿಸಿದರು.

 

LEAVE A REPLY

Please enter your comment!
Please enter your name here