ಮುರುಳ್ಯ ಶಾಂತಿನಗರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

0


75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಆ. 15ರಂದು ಮುರುಳ್ಯ ಶಾಂತಿನಗರ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್ ನಡುಬೈಲು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿ ಮುರುಳ್ಯ, ಉಪಾಧ್ಯಕ್ಷರಾದ ವನಿತಾ ಸುವರ್ಣ, ಪಂಚಾಯತ್ ಸದಸ್ಯರಾದ ಶೀಲಾವತಿ ಗೋಳ್ತಿಲ, ಪುಷ್ಪಾವತಿ ಕುಕ್ಕಟ್ಟೆ, ಕರುಣಾಕರ ಪಡ್ಡಂಬೈಲು, ಮಾಜಿ ಎಪಿಎಂಸಿ ಅಧ್ಯಕ್ಷರುಗಳಾದ ಶೇಷಪ್ಪ ಗೌಡ, ಪುಟ್ಟಣ್ಣ, ಮಾಜಿ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಮುಖ್ಯ ಶಿಕ್ಷಕಿ ಪದ್ಮಾವತಿ, ಗೈಡ್ ಕ್ಯಾಪ್ಟನ್ ಸರೋಜಿನಿ ಕೆ, ಅಂಗನವಾಡಿ ಕಾರ್ಯಕರ್ತೆ, ಪೋಷಕರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುರುಳ್ಯ ಪಂಚಾಯತ್ ನ ತನಕ ಶಾಲಾ ಮಕ್ಕಳಿಂದ ಮೆರವಣಿಗೆಯನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ಸಿಹಿ ತಿಂಡಿಯನ್ನು ವಿತರಿಸಿದರು. ನಂತರ ಶಾಲಾ ಎಸ್. ಡಿ.ಎಂ.ಸಿ. ಅಧ್ಯಕ್ಷ ದಿನೇಶ್ ನಡುಬೈಲು ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿ ಶಿಕ್ಷಕಿ ಪದ್ಮಾವತಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಬೇಬಿ, ಗೈಡ್ ಕ್ಯಾಪ್ಟನ್ ಸರೋಜಿನಿ ಕೆ ಉಪಸಿತರಿದ್ದರು. ಶಿಕ್ಷಕಿಯರಾದ ಸಚಿತಾ ಸ್ವಾಗತಿ, ಶಾಲಿನಿ ವಂದಿಸಿದರು, ಸರಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.