ಸುಳ್ಯ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್ ನಲ್ಲಿ 70 ಪ್ರಕರಣಗಳು ಇತ್ಯರ್ಥ

0

 

ಸುಳ್ಯ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತ ರವರ ನೇತೃತ್ವದಲ್ಲಿ ಅಗಸ್ಟ್ 13ರಂದು ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಿತು. ಈ ಅದಾಲತ್ ಕಾರ್ಯಕ್ರಮದಲ್ಲಿ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 22 ಪ್ರಕರಣಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 48 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ.
ವಿವಿಧ ಪ್ರಕರಣಗಳು ಸೇರಿದಂತೆ ಒಟ್ಟು 40,68 424/- ರೂಪಾಯಿಯ ಮೊತ್ತ ವಸೂಲಾತಿಗೊಂಡಿದೆ. ಕೆನರಾ ಬ್ಯಾಂಕಿನ ಸಾಲ ವಸೂಲತಿ ಪ್ರಕರಣಕ್ಕೆ ಸಂಬಂಧಿಸಿ 12853,764 ರೂಪಾಯಿಯ ಒಟ್ಟು 29 ಪ್ರಕರಣಗಳು ಮುಕ್ತಾಯಗೊಂಡಿರುತ್ತದೆ. ಲೋಕ ಅದಾಲತ್ ಕಾರ್ಯಕ್ರಮದ ಇತ್ಯರ್ಥ ಪಡಿಸುವ ವಿಭಾಗದಲ್ಲಿ ಸಂಧಾನಕಾರರಾಗಿ ಹಿರಿಯ ವಕೀಲರಾದ ಕೆ ರವೀಂದ್ರನಾಥ್ ರೈ ಮತ್ತು ರಾಮಕೃಷ್ಣ. ಎ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ಧನ.ಬಿ ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here