ಮುರ್ಕೆತ್ತಿ ಅಂಗನವಾಡಿ ಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಎಲ್ಲಾ ಧರ್ಮಿಯರು ಒಂದಾಗಿ ಬಾಳುವ  ಪೂರ್ಣಿಮ

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ಅಂಗನವಾಡಿ ಕೇಂದ್ರ, ಜ್ಞಾನ ದೀಪ ಸ್ತ್ರಿಶಕ್ತಿ ಸ್ವಸಹಾಯ ಸಹಾಯ ಸಂಘ,ತ್ರೀವೇಣಿ ಚಾರಿಟೇಬಲ್ ಟ್ರಸ್ಟ್ ಪೆರುವಾಜೆ ಇದರ ವತಿಯಿಂದ ಅಂಗನವಾಡಿ ಮುರ್ಕೆತ್ತಿಯಲ್ಲಿ ಅಮ್ರತಮಹೋತ್ಸವ ದ ಧ್ವಜಾರೋಹಣ ವನ್ನು ಪ್ರಗತಿ ಪರ ಕೃಷಿಕ ರಾದ ಶಿವಸುಬ್ರಹ್ಮಣ್ಯ ಭಟ್ ನೇರವೇರಿಸಿದರು.

ಸಭಾಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ವಹಿಸಿ ಮಾತನಾಡಿ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಲ್ಲಾ ಧರ್ಮಿಯರು ಜೊತೆಯಾಗಿ ಇದ್ದು ನಾವೆಲ್ಲ ಒಗ್ಗಟ್ಟಾಗಿ ಜೀವನ ನಡೆಸುವ ಇದುವೇ ಸ್ವಾತಂತ್ರ್ಯ ದಿನಾಚರಣೆ ಯ ಧ್ಯೇಯ ವಾಗಲಿ ಎಂದರು.

ಸಭಾ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ, ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ಗೌಡ ನಾರ್ಕೊಡು, ಜುಮ್ಮಾ ಮಸೀದಿಯ ಮೊಯಿದ್ದೀನ್ ಉಪಸ್ಥಿತರಿದ್ದರು.

ಪುಟಾಣಿಗಳಿಗೆ ಸ್ಪರ್ಧೆ ಬಹುಮಾನ ವಿತರಣೆ ನಡೆಯಿತು.

ಸಂಘ ಸಂಸ್ಥೆಗಳು, ದಾನಿಗಳು ಸಿಹಿತಿಂಡಿ ವ್ಯವಸ್ಥೆ ಮಾಡಿದ್ದು, ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.
ಮಹಮ್ಮದ್ ಶರೀಫ್ ಸ್ವಾಗತಿಸಿದರು.

 

LEAVE A REPLY

Please enter your comment!
Please enter your name here