ಜೂಡಾನ್ ಗ್ರೂಪ್ ಹಾಗೂ ಕೆನರಾ ಬ್ಯಾಂಕ್ ಮತ್ತು ಸ್ಪಾಟ್ ಕಂಪ್ಯೂಟರ್ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

0

 

ಜೂಡಾನ್ ಗ್ರೂಪ್ ಹಾಗೂ ಕೆನರಾ ಬ್ಯಾಂಕ್ ಮತ್ತು ಸ್ಪಾಟ್ ಕಂಪ್ಯೂಟರ್ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆ 15 ರಂದು ಕಲ್ಲುಗುಂಡಿ ಕೆನರಾ ಬ್ಯಾಂಕ್ ಆವರಣದಲ್ಲಿ ನಡೆಯಿತು.

ಧ್ವಜಾರೋಹಣ ವನ್ನು ನಿವೃತ್ತ ಸೈನಿಕರಾದ ಸಿಲಾ ಸಿ ಎಸ್ ಕ್ರಾಸ್ತ ನೇರವರಿಸಿ ಶುಭಹಾರೈಸಿ ದೇಶ ಪ್ರೇಮ ವನ್ನು ಮನೆ ಮನೆಯಲ್ಲಿ ಮಕ್ಕಳಿಗೆ ರೂಡಿಸಿಕೊಳ್ಳಬೇಕು ಎಂದು ಮಾತಾನಾಡಿದರು.ಮುಖ್ಯ ಅತಿಥಿ ಗಳಾಗಿ ಜೂಡಾನ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ರಾದ ಅರುಣ್ ಟಿಜೆ,ಕೆನರಾ ಬ್ಯಾಂಕ್ ಸಂಪಾಜೆ ವ್ಯವಸ್ಥಾಪಕರಾದ ಸಂತೋಷ್ ಬಾಬು,ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರದ ನಿರ್ದೇಶಕ ರಾದ ಕಿಶೋರ್ ಕುಮಾರ್ ಭಾಗವಹಿಸಿದ್ದರು.ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು ಮತ್ತು .ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಬಿತ್ತಿ ಪತ್ರ ಅನಾವರಣ ಗೊಳಿಸಲಾಯಿತು. ಹಾಗೂ ಕರ್ನಾಟಕ ಕಂಪ್ಯೂಟರ್ ಎಜುಕೇಷನ್ ಉಚಿತವಾಗಿ ತರಬೇತಿ ಪಡೆದ ಮಕ್ಕಳಿಗೆ ಪಿ ಎಂ ಜಿ ದಿಶಾ ಪ್ರಮಾಣ ಪತ್ರ ಕೊಡಮಾಡಲಾಯಿತು.
ಜೂಡಾನ್ ಗ್ರೂಪ್ ನ ಸಿಬ್ಬಂದಿವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು.ಸಂಸ್ಥೆಯ ವ್ಯವಸ್ಥಾಪಕರಾದ ಲೂಕಾಶ್ ಟಿ ಐ, ಸ್ವಾಗತಿಸಿ ವಂದಿಸಿದರು.