ಗ್ರಾಮ ಒನ್ ಸಂಪಾಜೆ, ಜೂಡೆನ್ ಗ್ರೂಪ್, ಕೆನರಾ ಬ್ಯಾಂಕ್ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

 

ಗ್ರಾಮ ಒನ್ ಸಂಪಾಜೆ, ಜೂಡೆನ್ ಗ್ರೂಪ್, ಕೆನರಾ ಬ್ಯಾಂಕ್ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ನಿವೃತ್ತ ಭಾರತೀಯ ಭದ್ರತಾ ಪಡೆಯ ಸೈನಿಕ ಸಿಲಾ ಸಿ ಎಸ್ ಕ್ರಾಸ್ತ ದ್ವಜಾರೋಹಣವನ್ನು ನೆರವೇರಿಸಿ, ಸಂದರ್ಬೋಚಿತವಾಗಿ ಮಾತನಾಡಿದರು .

ಕಾರ್ಯಕ್ರಮದಲ್ಲಿ ಆಜಾದಿ ಕ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ದೆ ವಿಜೇತರಿಗೆ ಹಾಗೂ ಯಶ್ವಸಿಯಾಗಿ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಬ್ಯಾಂಕ್ ಮೇನೇಜರ್ ಸಂತೋಷ್ ಬಾಬು ವಿತರಿಸುದರು. ಇದೇ ಸಂದರ್ಭದಲ್ಲಿ ಗ್ರಾಮ ಒನ್ ಬಗ್ಗೆ ಕರಪತ್ರ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೂಡೆನ್ ಗ್ರೂಪಿನ ಎಂ.ಡಿ. ಅರುಣ್ ಟಿ.ಜೆ. ಕಂಪ್ಯೂಟರ್ ಕೇಂದ್ರದ ನಿರ್ದೇಶಕರಾದ ಕಿಶೋರ್‍ ಕುಮಾರ್, ಗ್ರಾಮಒನ್ ನ ದರ್ಮಾವತಿ ಕಿಶೋರ್ ಹಾಗೂ ಸಿಬ್ಬಂದಿ ವರ್ಗದವರು. ಈ ಕಾರ್ಯಕ್ರಮವನ್ನು ಜೂಡೆನ್ ಗ್ರೂಪಿನ ಮೇನೇಜರ್ ಲೂಕಾಸ್ ನಿರೂಪಿಸಿ, ಶುಭಶ್ರಿ ವಂದಿಸಿ. ಎಲ್ಲಾ ಸಂಸ್ಥೆಗಳ ಸಿಬ್ಬಂಧಿ ವರ್ಗದವರು ಹಾಜರಿದ್ದರು.