ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ ಉಪನ್ಯಾಸ

0

ಕೇಪು ಸುಂದರ ಮಾಸ್ತರ್ ರಿಂದ ದತ್ತಿನಿಧಿ ವಿತರಣೆ-ಸನ್ಮಾನ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾತ್ರಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು, ನವಚೇತನ ಯುವಕಮಂಡಲ ಬೊಳುಬೈಲು, ಗ್ರಾ.ಪಂ.ಜಾಲ್ಸೂರು ಇವರ ಜಂಟಿ ಆಶ್ರಯದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ-1837 ಉಪನ್ಯಾಸ ಮಾಲಿಕೆ ಹಾಗೂ ಕೇಪು ಸುಂದರ ಮಾಸ್ತರ್ ರಿಂದ ದತ್ತಿನಿಧಿ ವಿತರಣೆ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣ: ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಕತ್ತಾರ್ ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು. ಜಾಲ್ಸೂರು ಗ್ರಾ.ಪಂ.ಅಧ್ಯಕ್ಷ ಬಾಬು ಕೆ.ಎಂ, ತಾಲೂಕು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟೈಲರ್, ಗ್ರಾ.ಪಂ.ಸದಸ್ಯರಾದ ತಿರುಮಲೇಶ್ವರಿ, ಸತೀಶ ಕೆಮನಬಳ್ಳಿ, ಸಂದೀಪ್ ಕದಿಕಡ್ಕ, ವಿನೋದ್ ಜಾಲ್ಸೂರು, ಗೋಪಾಲಕೃಷ್ಣ ಮಹಾಬಲಡ್ಕ ಹಾಗೂ ಶ್ಯಾಮ ಎ.ಕೆ, ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ, ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಬೋಧಕೇತರ ವೃಂದ ಉಪಸ್ಥಿತರಿದ್ದರು. ಬಳಿಕ ಸಭಾಕಾರ್ಯಕ್ರಮ ನಡೆಯಿತು.


ಉಪನ್ಯಾಸ-ದತ್ತಿನಿಧಿ ವಿತರಣೆ-ಸನ್ಮಾನ:
ನಂತರ ನಿವೃತ್ತ ಶಿಕ್ಷಕ ಹಾಗೂ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಾಜಿ ಅಧ್ಯಕ್ಷ ಕೇಪು ಸುಂದರ ಮಾಸ್ತರ್‌ಅವರು ನೀಡುವ ದತ್ತಿನಿಧಿಯನ್ನು ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುಳ್ಯ ತಾಲೂಕು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟೈಲರ್ ಜಾಲ್ಸೂರು ಅವರು ಬಡ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ಬಳಿಕ ನವಚೇತನ ಯುವಕಮಂಡಲ ಬೊಳುಬೈಲು ಇವರ ವತಿಯಿಂದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ-೧೮೩೭ ಉಪನ್ಯಾಸ ಮಾಲಿಕೆಯಲ್ಲಿ ಮಡಿಕೇರಿ ಅಕಾಶವಾಣಿ ಉದ್ಘೋಷಕ ವಿನೋದ್ ಮೂಡಗದ್ದೆ ಉಪನ್ಯಾಸ ನೀಡಿ, ೧೮೩೭ರಿಂದ ಸುಳ್ಯದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕೆದಂಬಾಡಿ ರಾಮಯ್ಯ ಗೌಡರ ನೇತ್ರತ್ವದಲ್ಲಿ ನಡೆಯಿತು.ಈ ಹೋರಾಟ ಬ್ರಿಟಿಷರನ್ನು ಭಾರತದಿಂದ ತೊಲಗಿಸಿ, ಸ್ವಾತಂತ್ರ್ಯವನ್ನು ಪಡೆಯುವುದೇ ಆಗಿತ್ತು. ಅಂದಿನನ ವೇಳೆ ಹೋರಾಟಮಾಡಿದ ಅನೇಕ ಸ್ವಾತಂತ್ರ್ಯ ಹೋರಾಟಮಾಡಿದ ಮಹಾತ್ಮರಿದ್ದಾರೆ. ಆದರೆ ಅದರ ದಾಖಲೆಗಳು ಇತ್ತೀಚೆಗೆ ಹೊರಬಂದ ಕೃತಿಗಳಿಂದ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುವ ಮತ್ತು ಈ ಭಾಗದ ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದರು.


ಸುಳ್ಯ ಬಸ್ ನಿಲ್ದಾಣಕ್ಕೆ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ನಾಮನಿರ್ದೇಶಿಸುವಂತೆ ಒತ್ತಾಯ: ಸುಳ್ಯ ಬಸ್ ನಿಲ್ದಾಣಕ್ಕೆ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ನಾಮನಿರ್ದೇಶಿಸುವಂತೆ ಮತ್ತು ಪಠ್ಯಪುಸ್ತಕದಲ್ಲೂ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಸೇರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾ.ಪಂ.ಅಧ್ಯಕ್ಷ ಬಾಬು.ಕೆ.ಎಂ ಹೇಳಿದರು.
ವೇದಿಕೆಯಲ್ಲಿ ನವಚೇತನ ಯುವಕ ಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು, ಗೌರವಾಧ್ಯಕ್ಷ ಜಯಪ್ರಕಾಶ್ ಬೈತ್ತಡ್ಕ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಹಾಗೂ ಗ್ರಾ.ಪಂ.ಸದಸ್ಯ ತಿರುಮಲೇಶ್ವರಿ, ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ, ಸುಳ್ಯ ತಾಲೂಕು ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟೈಲರ್ ಜಾಲ್ಸೂರು, ಶಿಕ್ಷಕ ವೃಂದ, ಯುವಕ ಮಂಡಲದ ಕಾರ್ಯದರ್ಶಿ, ಸದಸ್ಯರು ಇದ್ದರು.
ಶಿಕ್ಷಕ ಶಿವಪ್ರಕಾಶ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ವಂದಿಸಿದರು. ದತ್ತಿನಿಧಿಯನ್ನು ಯನ್ನು ಶಿಕ್ಷಕಿ ಜಯಲತಾ ವಾಚಿಸಿ, ಬಹುಮಾನ ಪಟ್ಟಿಯನ್ನು ಶಿಕ್ಷಕಿ ಮೀನಕುಮಾರಿ ವಾಚಿಸಿದರು. ಶಿಕ್ಷಕಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.