ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದ 75ರ ಸಂಭ್ರಮ

0

ಚೊಕ್ಕಾಡಿಯ ಭಗವಾನ್‌ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಆ. 15ರಂದು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಅಧ್ಯಕ್ಷರಾದ ಲಕ್ಮೀನಾರಾಯಣ ಕೋಟೆಯವರು ಧ್ವಜಾರೋಹಣ ನಡೆಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ಲೆಪ್ಟಿನೆಂಟ್ ಕೆ.ಎಸ್‌ ದೇವಯ್ಯ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಗುಣಶೇಖರ ಭಟ್ ಸ್ವಾಗತಿಸಿದರು. 10 ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್‌ ಎಚ್‌ ಎ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ನಂತರ ಸಿಹಿತಿಂಡಿಯನ್ನು ಹಂಚಲಾಯಿತು. ಬಳಿಕ ಶಾಲೆಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕೋಟೆಯವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ಸೇನೆಯ ಲೆಪ್ಟಿನೆಂಟ್ ಕೆ .ಎಸ್‌ ದೇವಯ್ಯ ಮಕ್ಕಳನ್ನು ಉದ್ದೇಶಿಸಿ ತಮ್ಮ ಸೇವಾ ಜೀವನ ಮಹತ್ವದ ಘಟನೆಗಳನ್ನು ಹೇಳಿದರು. ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ಪ್ರೋತ್ಸಾಹಿಸಿದರು. ಸಂಸ್ಥೆಯಲ್ಲಿ ಎನ್.ಸಿ.ಸಿ. ಘಟಕವನ್ನು ತೆರೆಯಲು ಬೇಕಾದ ಸಂಪೂರ್ಣ ಪ್ರೋತ್ಸಾಹವನ್ನು ನೀಡುತ್ತೇನೆಂದು ಹೇಳಿದರು. ಸಭೆಯಲ್ಲಿ ಲೆಪ್ಟಿನೆಂಟ್ ಕೆ .ಎಸ್‌ ದೇವಯ್ಯರ ಪತ್ನಿ ಶ್ರೀಮತಿ ಕವಿತಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಾಯಿಪ್ರಸಾದ ಅಜ್ಜನಗದ್ದೆ, ಖಜಾಂಚಿ ಮಹಾಬಲೇಶ್ವರ ಕಾಂಚೋಡು, ಟ್ರಸ್ಟ್‌ನ ಸದಸ್ಯರಾದ ಸಾಯಿ ಸಂತೋಷ್‌, ಉಮೇಶ ಹೂಲಿ, ಪೋಷಕರು, ಸತ್ಯಸಾಯಿ ಸೇವಾಸಮಿತಿ ಸಂಚಾಲಕರಾದ ತೇಜಪ್ರಕಾಶ್, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಮಕ್ಕಳು ಭಾಗವಹಿಸಿದರು. ಮುಖ್ಯೋಪಾಧ್ಯಾಯರಾದ ಗುಣಶೇಖರ ಭಟ್‌ ಸ್ವಾಗತಿಸಿ ಸಹಶಿಕ್ಷಕ ವೆಂಕಟಗಿರಿ ಪಿ.ಕೆ ವಂದಿಸಿದರು. 10 ನೇ ತರಗತಿ ವಿದ್ಯಾರ್ಥಿನಿಯರಾದ ಶ್ರೀಯಾ ಹಾಗೂ ಪೃಥ್ವಿ ವೈ.ಬಿ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು.

ಸಭಾಕಾರ್ಯಕ್ರಮದ ನಂತರ ಪ್ರತಿ ವರ್ಷದಂತೆ ಅಣಕು ಸಂಸತ್ತು ನಡೆಯತು.

LEAVE A REPLY

Please enter your comment!
Please enter your name here