ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

0

75 ನೇ ಸ್ವಾತಂತ್ರ್ಯ ಸಂಭ್ರಮವು ಅತೀ ವಿಜೃಂಭಣೆಯಿಂದ ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯಲ್ಲಿ ನಡೆಯಿತು.

ಖಲೀಲ್ ಹಿಮಮಿ ಸಖಾಫಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.‌
ಸಂಸ್ಥೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ,ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ ಮಡಿದ ಯೋಧರ ಸ್ಮರಿಸಿ ಯೂಸುಫ್ ಮುಸ್ಲಿಯಾರ್ ಮಾತನಾಡಿದರು.
ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ, ಧರ್ಮಗಳೆಡೆಯಲ್ಲಿ ತಡೆಗೋಡೆಗಳನ್ನು ಕಟ್ಟದೆ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದು ಮುಕ್ತಾರ್ ಹಿಮಮಿ ಸಖಾಫಿ ಸಂದೇಶ ಭಾಷಣ ನಡೆಸಿದರು.
ಅಬ್ದುಲ್ ರಹ್ಮಾನ್ ಸಖಾಫಿ,ನಾಸಿರ್ ಆರಾಂಡ,ಸಾಬಿತ್ ನಿಂತಿಕಲ್ಲು ,ಸಅದ್ ಪಂಜಿಕ್ಕಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಮಂಶ ಉಲ್ ಬಯಾನ್ ಮಾಸಿಕ ಕೈ ಬರಹವನ್ನು ಬಿಡುಗಡೆಗೊಳಿಸಲಾಯ್ತು .ಸ್ವಾತಂತ್ರ್ಯೋತ್ಸವದ ಭಾಗವಾಗಿ ಮದರಸ ಮಕ್ಕಳಿಗೆ ನಡೆಸಿದ ಸ್ಪರ್ಧೆಗಳಿಗೆ ಬಹುಮಾನ ವಿತರಿಸಿ, ಸಂಸ್ಥೆಯ ನೂರರಷ್ಟು ಬರುವ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು . ರಿಝ್ವಾನ್ ಹಿಮಮಿ ಸಖಾಫಿ ಧನ್ಯವಾದ ಸಲ್ಲಿಸಿ ಮಾತನಾಡಿದರು. ಜಲೀಲ್ ಮುಸ್ಲಿಯಾರ್, ಸಿದ್ದೀಕ್ ಹಿಮಮಿ,ಕಬೀರ್ ಹಿಮಮಿ,ಇಲ್ಯಾಸ್ ಹಿಮಮಿ, ಮಹಮ್ಮದ್ ನೇಲ್ಯಮಜಲು,ಮಹಮ್ಮದ್ ಕಳಂಜ ಮುಂತಾದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here