ಬಾಳುಗೋಡು ಸರಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ  

0

 

ಬಾಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯನ್ನು ಆ.15 ರಂದು ಆಚರಿಸಲಾಯಿತು. ಹಿರಿಯರಾದ ಸುಂದರ ಗೌಡ ಮುಚ್ಚಾರ ಧ್ವಜಾರೋಹಣ ನೆರವೇರಿಸಿದರು. ಚಂದ್ರಹಾಸ ಶಿವಾಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಾಲಣ್ಣ ಗೌಡ ಬಾಳುಗೋಡು, ಯುವ ಉದ್ಯಮಿ ರಾಜೇಶ್ ಕಿರಿಭಾಗ ,ಕೆ.ವಿ.ಸುಧೀರ್,ರಾಧಾಕೃಷ್ಣ ಕಟ್ಟೆಮನೆ,ಧನಂಜಯ ಬಾಳುಗೋಡು, ಜಯರಾಮ ಮುಂಡೋಕಜೆ ಹಾಗೂ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯ ನಾಗರಿಕರು ಭಾಗವಹಿಸಿದರು.