ಸಂಪ್ಯಾಡಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ

0

 

ಸಂಪ್ಯಾಡಿ ಸ.ಕಿ.ಪ್ರಾ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆ. 15 ರಂದು ನಡೆಯಿತು.

 ಧ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ನಡುಮನೆ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆದು ವಿಧ್ಯಾರ್ಥಿಗಳಿಗೆ ಗ್ರಾಮ ವಿಕಾಸ ಸಮಿತಿ ಬಳ್ಪ, ಕೇನ್ಯ ಇದರ ವತಿಯಿಂದ ಪ್ಲಾಸ್ಟಿಕ್ ಸಂಗ್ರಹ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಇನ್ನಿತರ ಸ್ಪರ್ದೆಗಳಿಗೆ ಶಾಲಾ ವತಿಯಿಂದ ಬಹುಮಾನ ನೀಡಲಾಯಿತು.

 ಈ ಸಂದರ್ಭದಲ್ಲಿ ಗೋಪಾಲಕೃಷ್ಣ ದರ್ಖಾಸು, ಸದಾನಂದ ರೈ ಅರ್ಗುಡಿ, ಅಂಗನವಾಡಿ ಕಾರ್ಯಕರ್ತೆ ಯಮುನ ಕೆ, ಶಾಲಾಭಿವೃದ್ದಿ ಸಮಿತಿ ಉಪಾದ್ಯಕ್ಷರಾದ ಕವಿತಾ ಸಂಪ್ಯಾಡಿ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಜಯಂತ ಸಂಪ್ಯಾಡಿ, ಶಿಕ್ಷಕರು, ವಿಧ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಸಿಹಿತಿಂಡಿ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಬಳ್ಪ ಗ್ರಾಮ ವರ್ತಕರ ಸಂಘದ ವತಿಯಿಂದ ಹಾಗೂ ಸದಾನಂದ ರೈ ಅರ್ಗುಡಿ ಮತ್ತು ಕವಿತಾನಾಗೇಶ್ ಸಂಪ್ಯಾಡಿ ಇವರು ಮಾಡಿದರು.