ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ  ಕೆ

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆ. 15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ನಿವೃತ ಪೋಲಿಸ್ ಅಧೀಕ್ಷಕರಾದಎಸ್. ರಾಮ್ ದಾಸ್ ಗೌಡ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರ ಬಲಿದಾನವೆ ನಮಗೆಲ್ಲ ಪ್ರೇರಣೆ. ಅವರೆಲ್ಲರ ತ್ಯಾಗ ಬಲಿದಾನದಿಂದಾಗಿ ನಾವಿಂದು ನೆಮ್ಮದಿಯ ಜೀವನ ನಡೆಸುವಂತಾಗಿದೆ.

ಯುವಜನತೆ ಈ ದೇಶದ ಆಸ್ತಿ. ಸತ್ಯ, ನಿಷ್ಠೆ ಮತ್ತು ಸಂಸ್ಕಾರಗಳನ್ನು ತನ್ನ ಜೀವನದಲ್ಲಿ ರೂಡಿಸಿಕೊಂಡು ಈ ಮಣ್ಣಿನ ಸಂಸ್ಕೃತಿಯನ್ನು ಉಳಿಸಿಕೊಂಡು ಈ ದೇಶದ ಸಮಗ್ರ ಅಭಿವೃದ್ಧಿಗೆ ಯುವಜನತೆ ಕಾರಣಕರ್ತರಾಗಬೇಕು. ದೇಶದ ಆಂತರಿಕ ಭದ್ರತೆ ಮತ್ತು ಸಮಗ್ರ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳಾದನೀವೆಲ್ಲರೂ ಕೈ ಜೋಡಿಸಿಕೊಂಡಾಗ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ ಎಂದರು.ಮುಖ್ಯ ಅಥಿತಿಗಳಾದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ), ಸುಳ್ಯ ಇದರ ಪ್ರಧಾನಕಾರ್ಯದರ್ಶಿಗಳೂ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಮಾತನಾಡಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಅಂದು ಮಾಡಿದ ಹೋರಾಟ ತ್ಯಾಗ, ಬಲಿದಾನ ಇನ್ನೂ ಜನಮಾನಸದಲ್ಲಿ ಹಚ್ಚಹಸುರಾಗಿ ಉಳಿದಿದೆ. ವಿದ್ಯಾರ್ಥಿ ಮಿತ್ರರಾದ ನೀವು ದೇಶದ ಅಭಿವೃದ್ದಿಯಲಿ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದಂತಹ ಪ್ರಾಮಾಣಿಕ ಸೇವೆ ಮಾಡುವ ಮೂಲಕ ದೇಶವನ್ನು ಬಲಪಡಿಸುವಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. 75 ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋದನೆಗೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ಸುಳ್ಯ, ಪುತ್ತೂರು, ಮಡಿಕೇರಿ ಈ ಭಾಗದಲ್ಲಿ ಪ್ರಥಮ ಭಾರಿಗೆ ನಮ್ಮ ಕೆ.ವಿ.ಜಿ ದಂತ ಮಹಾವಿದ್ಯಾಲಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಬಿಸಿಟಿ ಯಂತ್ರವನ್ನು ಅಳವಡಿಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ತೆರೆದು ಕೊಳ್ಳುವಂತೆ ಮಾಡಲಾಗುವುದು. ಈ ವ್ಯವಸ್ಥೆಯನ್ನು ಸಾರ್ವಜನಿಕ ಬಂಧುಗಳು ಸದುಪಯೋಗ ಮಾಡಿಕೊಳ್ಳುವಂತೆ ಕೇಳಿಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಕ್ಷ ನಾಯಕ್, ಕೆ.ವಿ.ಜಿ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಕೆ.ವಿ.ಜಿ ದಂತ ಮಹಾ ವಿದ್ಯಾಲಯದ ಆಡಳಿತ ಪರಿಷತ್ ಸದಸ್ಯರಾದ ಎನ್.ಎ ರಾಮಚಂದ್ರ ಅವರು ಸಮಾರಂಭಕ್ಕೆ ಶುಭ ಹಾರೈಸಿ ಮಾತುಗಳನ್ನಾಡಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತುಷಾರ್ ಭಟ್ ಸ್ವಾಗತಿಸಿ, ಅನುಜ್ಞಾ ಬಾಲೆಂಬಿ ಅತಿಥಿಗಳನ್ನು ಪರಿಚಯಿಸಿ ಆದರ್ಶ ಕಾರ್ಯಕ್ರಮಕ್ಕೆ ವಂದನಾರ್ಪಣೆಗೈದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರುಗಳಾದ ಡಾ.ಶರತ್ ಕುಮಾರ್, ಡಾ. ಸವಿತಾ ಸತ್ಯಪ್ರಸಾದ್, ಡಾ.ದಯಾಕರ್ ಎಮ್.ಎಮ್, ಡಾ. ಕೃಷ್ಣ ಪ್ರಸಾದ್, ಡಾ.ನುಸ್ರತ್ ಫರೀದ್, ಡಾ.ಸುಹಾಸ್ ರಾವ್, ಡಾ. ಜಯಪ್ರಸಾದ್ ಆನೇಕರ್, ಡಾ.ಪ್ರಸನ್ನ ಕುಮಾರ್ ಡಿ, ಡಾ. ಹರಿಶ್ಚಂದ್ರ ರೈ ಮತ್ತು ದಂತ ಮಹಾವಿದ್ಯಾಲಯದ ಆಡಳಿತ ಪರಿಷತ್ ಸದಸ್ಯರಾದ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಪರೀಕ್ಷಾ ವಿಭಾಗದ ಮುಖ್ಯ ಸಂಯೋಜಕರಾದ ಡಾ. ರೇವಂತ್, ಆಡಳಿತಾಧಿಕಾರಿ ಬಿ.ಟಿ ಮಾಧವ ಹಾಗು ಬೋಧಕ-ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಿತು.