ದೇವಚಳ್ಳ : ಅಮೃತಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಣೆ, ಸನ್ಮಾನ

0

ದೇವಚಳ್ಳ ಗ್ರಾಮ ಪಂಚಾಯತ್ ನಲ್ಲು ಅಮೃತಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮಗಳು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಅಚ್ರಪ್ಪಾಡಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಸುಲೋಚನಾ ದೇವ ವಹಿಸಿದ್ದರು. ವೇದಿಕೆಯಲ್ಲಿ
ಉಪಾಧ್ಯಕ್ಷೆ ರಾಜೇಶ್ವರಿ ಮಾವಿನಕಟ್ಟೆ ಹಾಗೂ ಪಂಚಾಯತ್ ಸದಸ್ಯರುಗಳಾದ ಶೈಲೇಶ್ ಅಂಬೆಕಲ್ಲು, ದುರ್ಗಾದಾಸ್ ಮೆತಡ್ಕ, ಪ್ರಶಾಂತ್ ಮೆದು, ರಮೇಶ್ ಪಡ್ಪು, ಭವಾನಿಶಂಕರ್ ಮುಂಡೋಡಿ, ಲೀಲಾವತಿ ಸೇವಾಜೆ, ಸೀತಮ್ಮ ಕರಂಗಲ್ಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಗೌರವಿಸಲಾಯಿತು.