ರೋಟರ್‍ಯಾಕ್ಟ್ ಜಿಲ್ಲಾ ಸಮಿತಿ ನಿರ್ದೇಶಕರಾಗಿ ಆರನೇ ಬಾರಿಗೆ ರೋ। ಬಿ.ಸುರೇಶ್ ಕಾಮತ್ ಜಯನಗರ ಆಯ್ಕೆ

0

 

p>

 

ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181 ಇದರ ರೋಟರ್‍ಯಾಕ್ಟ್ ಜಿಲ್ಲಾ ಸಮಿತಿಯ ಕಾರ್ಯಚಟುವಟಿಕೆ ನಿರ್ದೇಶಕರಾಗಿ ಸುಳ್ಯ ರೋಟರ್‍ಯಾಕ್ಟ್ ಕ್ಲಬ್ ಇದರ ಮಾಜಿ ಅಧ್ಯಕ್ಷರಾದ ರೋ।ಬಿ.ಸುರೇಶ್ ಕಾಮತ್ ಜಯನಗರ ಇವರು 6ನೇ ಬಾರಿಗೆ ಆಯ್ಕೆಯಾಗಿ ಮೈಸೂರಿನಲ್ಲಿ ನಡೆದ ರೋಟರ್‍ಯಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ರೋಟರ್‍ಯಾಕ್ಟ್ ಕ್ಲಬ್ ಡಿಸ್ಟ್ರಿಕ್ ಫೇರ್‌ಮೇನ್ ರೋ.ರತ್ನಾಕರ ರೈ ಇವರಿಂದ ಅಧಿಕಾರ ಸ್ವೀಕರಿಸಿದರು.

ಇವರು ಸುಳ್ಯ ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅತ್ಯುತ್ತಮ ಅಧ್ಯಕ್ಷ, ಅತ್ಯುತ್ತಮ ಘಟಕ ಮುಂತಾದ ಹಲವು ಪ್ರಶಸ್ತಿಗಳನ್ನು ಹಾಗೂ ಜಿಲ್ಲಾ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿರುತ್ತಾರೆ ಮತ್ತು ರೋಟರ್‍ಯಾಕ್ಟ್ ಕ್ಲಬ್‌ನ ವಲಯಾಧ್ಯಕ್ಷರಾಗಿ ಕೂಡ ಆಯ್ಕೆಗೊಂಡು ಅತ್ಯುತ್ತಮ ವಲಯಾಧ್ಯಕ್ಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಇವರು ಸುಳ್ಯದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ತಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here