ಬೆಳ್ಳಾರೆ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ

0

ಭಾರತ ಸ್ವಾತಂತ್ರ್ಯ ದ ಅಮೃತ ಮಹೋತ್ಸವವನ್ನು ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಆ. 15ರಂದು ಧ್ವಜಾರೋಹಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮುಖಾಂತರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ತಿರುಪತಿ ಸಂಸ್ಕೃತ ಮಹಾವಿದ್ಯಾಲಯ ಹೆಚ್.ಒ.ಡಿ. ಪ್ರೊ. ಕೆ. ಗಣಪತಿ ಭಟ್ ಧ್ವಜಾರೋಹಣ ಗೈದು ಮಾತನಾಡಿ ” ಕನಸುಗಳನ್ನು ಹೊತ್ತು ಆರಂಭಿಸುವ ನಮ್ಮ ವಿಧ್ಯಾಭ್ಯಾಸಕ್ಕೆ ಶಿಕ್ಷಕರ ಬೆಂಬಲ ಬಹಳ ಹೆಚ್ಚಿನದ್ದಾಗಿರುತ್ತದೆ. ಉನ್ನತ ಹಂತವನ್ನು ತಲುಪುವ ನಮ್ಮ ಸಂತೋಷದಲ್ಲಿ ಅವರು ತಮ್ಮ ಸಂತೋಷವನ್ನು ಕಾಣುವ ಅವರನ್ನು ಸನ್ಮಾನಿಸಬೇಕು.
ವಿದ್ಯೆಗೆ ವಿನಯ, ಸಾಹಸ, ಧೈರ್ಯ ಮತ್ತು ಬುದ್ಧಿವಂತಿಕೆಗಳಿರಬೇಕು.
ಸ್ವತಂತ್ರ ಭಾರತದ ಸುವರ್ಣ ಮಹೋತ್ಸವದಲ್ಲಿ ನಾವು ವಿದ್ಯಾವಂತರಾಗಿ ಬಾಳಿ ನಮ್ಮ ದೇಶದ ಸೇವೆಯನ್ನು ಮಾಡಬೇಕು. ನಮ್ಮ ಶಕ್ತಿಯನ್ನನುಸರಿಸಿ ನಮ್ಮಂತೆಯೇ ಇರುವಂತಹ ವ್ಯಕ್ತಿಗಳಿಗೂ, ದೀನ, ದಲಿತ, ಬಡ ಬಗ್ಗರು ಇವರಿಗೆ ನಮ್ಮ ಆರ್ಜನೆಯಲ್ಲಿ ಸ್ವಲ್ಪವನ್ನಾದರೂ ದಾನ ಮಾಡಬೇಕು.
ಸಂಫೂರ್ಣ ಭವನವೊಂದರ ನಿರ್ಮಾಣ ಹೇಗೆ ಕೇವಲ ಇಡೀ ಇಟ್ಟಿಗೆಗಳಿಂದ ಮಾತ್ರ ಸಾಧ್ಯವಿಲ್ಲವೋ ಹಾಗೇ ಕೇವಲ ವೈದ್ಯರು, ಎಂಜಿನಿಯರ್ ಗಳು ಮಾತ್ರ ಈ ದೇಶಕ್ಕೆ ಸಾಲದು ಬದಲಾಗಿ ಆರ್ಥಿಕ ತಜ್ಞರೂ, ಕೆಲಸ ಗಾರರೂ ಎಲ್ಲರ ಸಹಬಾಳ್ವೆ, ಸಹಯೋಗ, ಸಮನ್ವಯತೆ ಯಿಂದ ಭಾರತವು ವಿಶ್ವ ಮಾನವತೆಯನ್ನು ಹೊಂದಿದೆ. ಆದ್ದರಿಂದ ನಾವು ನಮ್ಮಿಂದ ಸಾಧ್ಯವಾದಷ್ಟು ದೇಶಸೇವೆಯನ್ನು ಮಾಡಬೇಕೆನ್ನುವ ಮನೋಭಾವ ಹೊಂದಬೇಕು” ಎಂದು ಅವರು ನುಡಿದರು.

ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್ ಮತ್ತು ಪ್ರಾಂಶುಪಾಲರಾದ ದೇಚಮ್ಮ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಂತರ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತದ ಸಂಸ್ಕೃತಿ ಹಾಗೂ ಸೈನಿಕ ಸೇವೆಯ ನೆನಪುಗಳನ್ನು ಪ್ರತಿಬಿಂಬಿಸಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಲಾಯಿತು.