ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರಕ್ಷಾ ಬಂಧನ ಮತ್ತು ಆಟಿ ಆಚರಣೆ

0

 

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಹಾಗೂ ಆಟಿ ಆಚರಣೆ ಕಾರ್ಯಕ್ರಮವು ಆ.14 ರಂದು ಲಯನ್ಸ್ ಸೇವಾ ಸದನದಲ್ಲಿ ನೆರವೇರಿತು.

 

ಸಭಾಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ರೂಪಾಶ್ರೀ.ಜೆ ರೈ ವಹಿಸಿದ್ದರು. ಬ್ರಹ್ಮಕುಮಾರಿ ಸಂಸ್ಥೆ ಸುಳ್ಯ ಇದರ ಸಂಚಾಲಕರಾದ ಪಿ.ಕೆ.ಉಮಾದೇವಿ ಇವರು ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಆಟಿ ಆಚರಣೆಯನ್ನು ಮಾಜಿ ಜಲ್ಲಾ ರಾಜ್ಯಪಾಲರಾದ ಲಯನ್ ಎಂ.ಬಿ.ಸದಾಶಿವರವರು ದೀಪ ಬೆಳಗಿ ತೆಂಗಿನ ಸಿಂಗಾರ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಲಯನ್ ಪುಷ್ಪ ರಾಧಕೃಷ್ಣ ಹಾಗೂ ಲಯನ್ ಲೀಲಾ ದಾಮೋಧರ್ ಚೆನ್ನೆಮಣೆ ಆಟದ ಮೂಲಕ ಆಟಿ ಆಚರಣೆಗೆ ಚಾಲನೆಯನ್ನು ನೀಡಿದರು.

ಲಯನ್ ದೊಡ್ಡಣ್ಣ ಬರಮೇಲುರವರು ಆಟಿ ಆಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳನ್ನು ಮಹಿಳೆಯರು ಮನೆಯಲ್ಲಿಯೆ ತಯಾರಿಸಿ ತಂದು ಲಯನ್ಸ್ ಸಂಸ್ಥೆಯ ಸದಸ್ಯರೆಲ್ಲರೂ ಜೊತೆ ಸೇರಿ ಸಹಾಭೋಜನವನ್ನು ಮಾಡಿದರು. ಲಯನ್ಸ್ ಕಾರ್ಯದರ್ಶಿ ಲಯನ್ ದೀಪಕ್ ಕುತ್ತಮೊಟ್ಟೆ ವರದಿ ವಾಚಿಸಿದರು. ಕೋಶಾಧಿಕಾರಿ ಲಯನ್ ಲಕ್ಷ್ಮೀಶರವರು ವಂದಿಸಿದರು.