ಕುಮಾರ ಪರ್ವತದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ

0

ಕುಮಾರ ಪರ್ವತದಲ್ಲಿ  75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿದ ಫಾರೆಸ್ಟ್ ಗಾರ್ಡ್ ಪುನೀತ್

ಭಾರತವನ್ನು ವಿಶ್ವಗುರು ಆಗಿ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು. ನಮ್ಮ ಕುಡ್ಲ ಚಾರಣ ಸಂಘ(ರಿ) ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಜಯರಾಮ್ ಮಾತನಾಡಿ ದೇಶದ ಪ್ರಗತಿಗೆ ಕೊಡುಗೆ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಫಾರೆಸ್ಟ್ ವೀಕ್ಷಕರಾದ ಸಜ್ಜನ್, ಮಿಲನ್, ವಂಶಿ, ಗುರುಶಾಂತ್ ಹಾಗೂ ನಮ್ಮ ಕುಡ್ಲ ಚಾರಣ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷರಾದ ಮಂಥನ್ ರೈ ಉಪಸ್ಥತರಿದ್ದರು. ಇಲಾಖೆಯ ಸಮವಸ್ತ್ರ ಧರಿಸಿ ಅರಣ್ಯ ವೀಕ್ಷಕರಿಗೆ ಫಾರೆಸ್ಟ್ ಗಾರ್ಡ್ ಪುನೀತ್ ರವರು ಅರಣ್ಯ ಸೇವಾಕಾರ್ಯದ ಕುರಿತು ವಿಶೇಷ ಮಾಹಿತಿ ನೀಡಿದರು. 

ಕುಮಾರ ಪರ್ವತದದ ಪ್ರಮುಖ ಆಕರ್ಷಣೆಯಾದ ಕಲ್ಲುಮಂಟಪದಲ್ಲಿ ನಡೆದ ಪಥಸಂಚನವು 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.