ಗುತ್ತಿಗಾರು : ಅಮರ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟ ವತಿಯಿಂದ ಅಮೃತ ಸ್ವಾತಂತ್ರ್ಯೋತ್ಸವ

0

 

ಮೆರವಣಿಗೆ, 9 ಮಂದಿ ಮಹಿಳೆಯರಿಗೆ ಸನ್ಮಾನ

 

 

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನ- ವಿವಿಧ
ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿ ನಿರತ ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸಿದ ಕಾರ್ಯಕ್ರಮ ಆ.15 ರಂದು ನಡೆಯಿತು.

ಗ್ರಾ. ಪಂ. ನ ಧ್ವಜಾರೋಹಣ ನಂತರ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ಗ್ರಾಮಸ್ಥ ಮಾತಾ ಭಗಿನಿಯರು ಜಯಘೋಷಗಳೊಂದಿಗೆ ವಿವಿಧ ವೇಷಭೂಷಣದಲ್ಲಿ ಟಾಬ್ಲೊ ಹಾಗೂ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನೊಂದಿಗೆ ಮೆರವಣಿಗೆ ನಡೆಯಿತು. ಗ್ರಾ.
ಪಂ.ಸದಸ್ಯೆ ಶ್ರೀಮತಿ ಲತಾಕುಮಾರಿ ಆಜಡ್ಕ, ಸಿಬ್ಬಂದಿ ಅಭಿಲಾಷರವರ ಘೋಷ ವಾಕ್ಯ ಕೂಗಿದರು. ಗುತ್ತಿಗಾರಿನ ಮುಖಪೇಟೆಯಲ್ಲಿ ಮೆರವಣಿಗೆ ಸಾಗಿ ಬಂದು ಪಂಚಾಯತ್ ಸಭಾಭವನದಲ್ಲಿ ಸನ್ಮಾನ ಸಮಾರಂಭ ನಡೆಯಿತು. ನಿವೃತ್ತ ಯೋಧೆ ಶ್ರೀಮತಿ ಅನಿತಾ ಮಹೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ ಲತಾ ಅಂಬೆಕಲ್ಲು,
ಗ್ರಾಮೀಣ ಪುನರ್ವಸತಿ ಶ್ರೀಮತಿ ಕಾವೇರಿ ಭರತ್,
ಮಹಿಳೆಯರಿಗೆ ಟೈಲರಿಂಗ್‌ ತರಭೇತಿ ನೀಡುವ ಶ್ರೀಮತಿ ನೆಬಿಸಾ ಕೆ,ಕಮ್ಮಾರಿಕೆ ವೃತ್ತಿಯ ಶ್ರೀಮತಿ ಲೀಲಾವತಿ,
ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆಸಲ್ಲಿಸುತ್ತಿರು ಶ್ರೀಮತಿ ಪ್ರೇಮ, ಗುತ್ತಿಗಾರಿನ ಘನ ತ್ಯಾಜ್ಯ ಘಟಕದ ನಿರ್ವಹಣೆ ಮಾಡುತ್ತಿರುವ ಶ್ರೀಮತಿ ರಮಿತಾ, ಶ್ರೀಮತಿ ರತ್ನಾವತಿ, ಶ್ರೀಮತಿ ವಸಂತಿ ಅವರುಗಳಿಗೆ ಸನ್ಮಾನ ನಡೆಯಿತು.
ಧ್ವಜ ಹೊಲಿದು ಕೊಟ್ಟ ಶಾರದ ಮತ್ತು 15ಜನ ಸದಸ್ಯರ ತಂಡವನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ, ತಾಲೂಕು ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ವೇತಾ, ಗ್ರಾ.ಪಂ. ಸದಸ್ಯರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮಾತ, ಜಗದೀಶ್ ಬಾಕಿಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳಾ ಸಂಘದ ಸದಸ್ಯರು, ಪುರುಷರು, ಒಕ್ಕೂಟದ ಪದಾಧಿಕಾರಿಗಳು, ಎಂ ಬಿ ಕೆ ಮಿತ್ರಕುಮಾರಿ ಚಿಕ್ಮುಳಿ, ಎಲ್ ಸಿ ಆರ್ ಪಿ ಹಾಜರಿದ್ದರು. ಮೆರವಣಿಗೆ ಕಾರ್ಯಕ್ರಮವನ್ನು ವಿಪತ್ತು ತಂಡದ ಸದಸ್ಯರ ನೇತೃತ್ವದಲ್ಲಿ ನಡೆಯಿತು. ದಿವ್ಯ ಚತ್ರಪ್ಪಾಡಿ ಮತ್ತು ಸವಿತಾ ಕುಳ್ಳಂಪಾಡಿ ಬಳಗದವರು ಪ್ರಾರ್ಥನೆ ನೆರವೇರಿಸಿದರು. ರವಿಕಲಾ ಚೆಮ್ನೂರು ಸ್ವಾಗತಿಸಿ, ಸವಿತ ಕುಳ್ಳಂಪಾಡಿ ವಂದಿಸಿದರು. ಒಕ್ಕೂಟ ಉಪಾಧ್ಯಕ್ಷೆ ಯಮಿತ ಪೂರ್ಣ ಚಂದ್ರ ಪೈಕ, ಹಾಗೂ ಅಭಿಲಾಷ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.