ಪೆರುವಾಜೆ ಸ. ಹಿ. ಪ್ರಾ.ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಪೆರುವಾಜೆ ಒಕ್ಕೂಟ, ಹಿರಿಯ ವಿದ್ಯಾರ್ಥಿಗಳ ಸಂಘ ಪೆರುವಾಜೆ, ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ, ಗ್ರಾಮ ಪಂಚಾಯತ್ ಪೆರುವಾಜೆ, ಪೋಷಕರು ಹಾಗೂ ದಾನಿಗಳ ಸಹಕಾರದೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

 


ಸಭೆಯ ಅಧ್ಯಕ್ಷತೆಯನ್ನು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಬೆಳ್ಳಾರೆ ವಲಯದ ಶಿಕ್ಷಣ ಸಂಯೋಜಕರಾದ ವಸಂತ ಏನೇಕಲ್ಲು, ಬೆಳ್ಳಾರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸವಿತಾ ಕುಮಾರಿ, ಎಸ್, ಡಿ, ಯಂ, ಸಿ, ಅಧ್ಯಕ್ಷರಾದ ಉದಯ ಗಣೇಶ್ ಅರ್ನಾಡಿ, ಮುಖ್ಯ್ಯೋಪಾಧ್ಯಾಯರಾದ ತೇಜಪ್ಪ ಎಸ್, ಉಪಸ್ಥಿತರಿದ್ದರು
ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು

ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದ ಸುಳ್ಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಎಸ್, ಪಿ, ಮಹಾದೇವ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಮಾಜಿ ಉಪಾಧ್ಯಕ್ಷರು, ವಿವಿಧ ಸಂಘ ಸಂಸ್ಥೆ ಯ ಅಧ್ಯಕ್ಷರು, ಸದಸ್ಯರು,, ಊರಿನ ಗಣ್ಯರು, ದಾನಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಾಲಾ ಮಕ್ಕಳಿಂದ ರಾಷ್ಟ್ರ ಭಕ್ತಿ ಯ ಹಾಡು, ನೃತ್ಯ ಕಾರ್ಯಕ್ರಮ ಜರುಗಿತು.
ಶಾಲಾ ಶಿಕ್ಷಕ ವೃಂದ, ಮತ್ತು ಪೋಷಕರು ಕಾರ್ಯಕ್ರಮ ಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here