ಕನ್ಯಾನ ಶಾಲೆಯಲ್ಲಿ‌ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

0

ಮಂಡೆಕೋಲು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ಯಾನದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮ ನಡೆಯಿತು. ಶಾಲಾ ಎಸ್.ಡಿ.ಎಂಸಿ. ಅಧ್ಯಕ್ಷ ಜನಾರ್ದನ ಮಿತ್ತಿಲ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿಯರಾದ ಶ್ರೀ ಮತಿ ಪ್ರಮೀಳಾರವರು ಮತ್ತು ಸಹಶಿಕ್ಷಕಿಯಾರಾದ ಸುನಿತಾರವರು ಮತ್ತು ನಿವೃತ್ತ ಶಿಕ್ಷಕಿಯರಾದ ಶ್ರೀ ಮತಿ ಕಾವೇರಿಯವರು ಉಪಸ್ಥಿತರಿದ್ದರು. ಆ ನಂತರ ಸ್ಪರ್ದಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಆಶಾಲತಾ ಕನ್ಯಾನ ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ಅಂಗವಾಗಿ ಕಾರ್ಯಕರ್ತರು, ಮತ್ತು ಗ್ರಾಮಸ್ಥರು ಹಾಜರಿದ್ದರು.