ರೋಟರಿ ಪ್ರೌಢಶಾಲೆ ಮಿತ್ತಡ್ಕ ದಲ್ಲಿ ಅಚ್ಯುತ ಅಟ್ಲೂರ್ ರವರಿಗೆ ಬೀಳ್ಕೊಡುಗೆ

0

ಅಗಸ್ಟ್ 11 ರಂದು ರೋಟರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 24 ವರ್ಷಗಳ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾದ ಅಚ್ಯುತ ಅಟ್ಲೂರ್ ರವರಿಗೆ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರ ಪರವಾಗಿ
ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ನಡೆಯಿತು .

 

ವಿದ್ಯಾ ರ್ಥಿಗಳು ಅಚ್ಯುತ ಅಟ್ಲೂರ್ ರವರ ಬಗ್ಗೆ ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರಾದ ಶ್ರೀಹರಿ ಪೈಂದೋಡಿ ಹಾಗೂ ಶ್ರೀಮತಿ ಜಯಶ್ರೀ ಕುಕ್ಕೆಟ್ಟಿ ಶುಭ ಹಾರೈಸಿದರು . ಸನ್ಮಾನ ಸ್ವೀಕರಿಸಿದ ಶ್ರೀಯುತರು ತಮ್ಮ 24 ವರ್ಷಗಳ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕ, ರೋಟರಿ ಅಧ್ಯಕ್ಷರಾದ ರೊ.ಚಂದ್ರಶೇಖರ್ ಪೇರಾಲ್, ರೋಟರಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ರೊ.ದಯಾನಂದ ಆಳ್ವ , ಮಹಾಲಕ್ಷ್ಮಿ ಕೊರಂಬಡ್ಕ , ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ , ಇಂಟರಾಕ್ಟ್ ಅಧ್ಯಕ್ಷೆ ಸನಿಹ ಶೆಟ್ಟಿ, ಕಾರ್ಯದರ್ಶಿ ತುಷಾರ್ ಕಾರ್ತಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.