ಸುದ್ದಿ ಸಮೂಹ ಸಂಸ್ಥೆಯ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ

0

 

ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಸುದ್ದಿ ಸಮೂಹ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆ ರಂಗಮಯೂರಿ ಕಲಾಶಾಲೆಯಲ್ಲಿ ಆ. 15ರಂದು ನಡೆಯಿತು.

ವಿವಿಧ ವಿಭಾಗಗಳಲ್ಲಿ ನಡೆದ ವೀಡಿಯೋ ಸ್ಪರ್ಧೆಗಳಲ್ಲಿ ಅಂತಿಮ ಸುತ್ತಿಗೆ ಬಂದ ಸ್ಪರ್ಧಿಗಳನ್ನು ರಂಗ ಮಯೂರಿ ಕಲಾ ಕೇಂದ್ರದಲ್ಲಿ ಕರೆದು ಆಗಸ್ಟ್ 15 ರಂದು ಸ್ಪರ್ಧೆ ನಡೆಯಿತು.


ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ವಹಿಸಿದ್ದರು .

ಮುಖ್ಯ ಅತಿಥಿಗಳಾಗಿ ಬಹುಮಾನ ಪ್ರಾಯೋಜಕರಾದ ಸೃಷ್ಟಿ ಫ್ಯಾನ್ಸಿ ಮತ್ತು ಬಿಗ್ ಮಿಶ್ರಾ ಪೇಡಾ ಮಳಿಗೆಯ ಮಾಲಕ ಶೈಲೇಂದ್ರ ಸರಳಾಯ, ಕುಂ ಕುಮ್ ಫ್ಯಾಷನ್ ನ ಮಾಲಕ ಧನರಾಮ್ ಪಟೇಲ್, ತೀರ್ಪುಗಾರರಾದ ಲೇಖಕಿ ಚಿತ್ರಾ ಮಟ್ಟಿ, ಶಿಕ್ಷಕಿ ಪರಮೇಶ್ವರಿ ಪ್ರಸಾದ್, ರಂಗ ಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದು ಶುಭ ಹಾರೈಸಿದರು.


ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸುದ್ದಿ ಸಮೂಹ ಸಂಸ್ಥೆ ಮತ್ತು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಸಹಯೋಗದೊಂದಿಗೆ ನಡೆದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ , ರಂಗ ಮಯೂರಿ ಕಲಾ ಕೇಂದ್ರದ ಸಹಯೋಗದೊಂದಿಗೆ ನಡೆದ ಜನಗಣಮನ ದೇಶಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.

 

ಸುದ್ದಿ ಅಕೌಂಟೆಂಟ್ ವಿಭಾಗದ ತನುಶ್ರೀ ಗುಡ್ಡನಮನೆ ಮತ್ತು ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ ಬಹುಮಾನಿತರ ಪಟ್ಟಿ ವಾಚಿಸಿದರು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ, ಸುದ್ದಿ ವೆಬ್ ಸೈಟ್ ವಿಭಾಗದ ಜಯಶ್ರೀ ಕೊಯಿಂಗೋಡಿ ವಂದಿಸಿದರು. ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತರು :

ಮುದ್ದು ಕೃಷ್ಣ ಫೋಟೋ ಸ್ಪರ್ಧೆಯ ವಿಭಾಗದಲ್ಲಿ
ದಿಹಾಲ್ ರೈ ಪ್ರಥಮ, ನಕ್ಷತ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮುದ್ದುಕೃಷ್ಣ ವೇಷ 1 ರಿಂದ 3 ವರ್ಷ ವಿಭಾಗದಲ್ಲಿ ತನ್ವಿ ಕಿರ್ಲಾಯ ಪ್ರಥಮ, ಈಶಾನ್ ಎಂ.ಪಿ ದ್ವಿತೀಯ, 3 ರಿಂದ 6 ವರ್ಷ ವಿಭಾಗದಲ್ಲಿ ಶ್ರೀಹಾನ್ ಮೋಂಟಡ್ಕ ಪ್ರಥಮ, ಐಶಾನಿ ದ್ವಿತೀಯ ಸ್ಥಾನ ಪಡೆದಿದ್ದಾರೆ.